
ಬೆಂಗಳೂರು: ಬಹುಭಾಷಾ ನಟಿ ಮೇಘನಾ ರಾಜ್ ಅವರ ವೈಯುಕ್ತಿಕ ಜೀವನದ ಕುರಿತು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲ ಗಾಸಿಪ್ ಗಳು ಹರಿದಾಡುತ್ತಿದೆ.
ಮೇಘನಾ ಅವರು ಸಂದರ್ಶನವೊಂದರಲ್ಲಿ ಮಾತನಾಡುವಾಗ “ರಾಯನ್ ಗೆ ಅಪ್ಪ ಅಂತ ಒಬ್ಬರು ಇರಬೇಕಿತ್ತು, ನನ್ನ ಜೀವನದಲ್ಲಿ ಮುಂದೊಂದು ದಿನ ವ್ಯಕ್ತಿಯೊಬ್ಬರು ಬಂದ್ರೆ ನನ್ನ ಲೈಫ್ ಗೆ ಆ ವ್ಯಕ್ತಿ ಸೂಕ್ತ ಅಂತ ಚಿರುಗೆ ಅನಿಸಿದ್ರೆ ಖಂಡಿತ ಅದು ಆಗುತ್ತದೆ. ಅವನಿಗೆ ಅನ್ನಿಸಿ ಅದನ್ನು ಅವನು ಮಾಡಿಸುತ್ತಾನೆ” ಎಂದು ಹೇಳಿದ್ದರು.
ಈ ವಿಚಾರ ಸಾಕಷ್ಟು ಚರ್ಚೆಯಾಗಿದ್ದು ಕೆಲವೊಂದಿಷ್ಟು ಜನ ಚಿರು ನಿಧನದ ಬಳಿಕ ಮೇಘನಾ ಅವರ ಎರಡನೇ ಮದುವೆ ಆಗುತ್ತಾರೆ ಎಂದು ಹೇಳಿದ್ದರು.
ಇದೀಗ “ಫಸ್ಟ್ ಡೇ ಫಸ್ಟ್ ಶೋ ಕನ್ನಡ” ದ ಜೊತೆ ಈ ರೂಮರ್ಸ್ ಕುರಿತು ಮಾತನಾಡಿದ ಮೇಘನಾ “ಈಗಿನ ಕಾಲದ ಜನರಿಗೆ ಅರ್ಥ ಆಗದೆ ಇದ್ರೂ ಕಮೆಂಟ್ ಮಾಡುತ್ತಾರೆ. ನಾನೇನು ಹೇಳಿದ್ದೇನೆ ಅಂತ ಅವರಿಗೆ ಅರ್ಥ ಆಗಿಲ್ಲ. ಆದ್ರೂ ಕಮೆಂಟ್ ಮಾಡಿದ್ದಾರೆ. ಅದರ ಬಗ್ಗೆ ಇವತ್ತು ನಾನು ಏನಾದರೂ ಉತ್ತರ ಕೊಟ್ಟರೆ ಅದಕ್ಕೂ ಕಾಮೆಂಟ್ ಮಾಡುತ್ತಾರೆ. ಇಂತಹವರಿಗೆ ನನಗೆ ಹೆಲ್ಪ್ ಮಾಡಲು ಇಷ್ಟವಿಲ್ಲ. ಇದನ್ನು ಪ್ರಶ್ನೆಯಾಗಿಯೇ ಉಳಿಸೋಣ” ಎಂದು ಹೇಳಿದ್ದಾರೆ.
ವಿಜಯ ರಾಘವೇಂದ್ರ ಅವರ ಜೊತೆ 2ನೇ ಮದುವೆ ಎಂಬ ರೂಮರ್ಸ್ ಕುರಿತು ಮಾತನಾಡಿದ ಅವರು “ನಾನೇನು ಹೇಳುತ್ತಿಲ್ಲ, ಎಲ್ಲಾ ಜನರೇ ಹೇಳ್ತಾ ಇದ್ದಾರೆ. ಅವರಿಗೆ ಎಷ್ಟು ಖುಷಿಯಾಗುತ್ತದೋ ಅಷ್ಟನ್ನು ಹೇಳಲಿ” ಎಂದು ತಮ್ಮದೇ ಆದ ಶೈಲಿಯಲ್ಲಿ ಉತ್ತರಿಸಿದ್ದಾರೆ.