5ನೇ ವರ್ಷದ “ಗೋದಾನ ಕಾರ್ಯಕ್ರಮ”& ವೀರ ಮಾತೆಯರಿಗೆ ಸನ್ಮಾನ

ಕಾರ್ಕಳ: ದಿನಾಂಕ 26.10.2025ರ ಆದಿತ್ಯವಾರದಂದು ಎನ್ ಸಂತೋಷ್ ಹೆಗಡೆ ಅಧ್ಯಕ್ಷತೆಯಲ್ಲಿ ಡಾಕ್ಟರ್ ರವೀಂದ್ರ ಶೆಟ್ಟಿ ಬಜಗೋಳಿ ಯವರ 5ನೇ ವರ್ಷದ ಗೋದಾನ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 9:00 ಎಸ್ ಪಿ ಗಾರ್ಡನ್ ಅಂಬಿದಗುಂಡಿ, ಹೆಪೆಜಾರು, ಬಜಗೋಳಿ ಇಲ್ಲಿ ,ಭಜನಾ ಕಾರ್ಯಕ್ರಮ ನಡೆಯಲಿದ್ದು 10 ಗಂಟೆಯ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಗೋಮಾತೆಯ ಈ ಕಾರ್ಯಕ್ರಮದಲ್ಲಿ ವೀರಮಾತೆಯರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಹಾಗೂ ನಿವೃತ್ತ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ,ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಅವರು ಉದ್ಘಾಟನೆ ಮಾಡಲಿದ್ದಾರೆ. ಭಾಸ್ಕರ್ ಎಸ್ ಕೋಟ್ಯಾನ್ ಕೊಳಕೆ ಇರ್ವತ್ತೂರು, ಗಣೇಶ ಶೆಟ್ಟಿ, ಶ್ರೀ ಸುಕುಮಾರ ಮೋಹನ್, ಮಹಾವೀರ ಜೈನ್, ಶ್ಯಾಮ ಎನ್ ಶೆಟ್ಟಿ, ಅಮೃತೇಶ್, ಪ್ರಕಾಶ್ ಆಚಾರ್ಯ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಡಾ| ಎಂ ಮೋಹನ್ ಆಳ್ವಾ ಮೂಡುಬಿದ್ರೆ, ಶ್ರೀ ದಾಮೋದರ ಶರ್ಮಾ, ಭಾಸ್ಕರ ಶೆಟ್ಟಿ, ಬೋಳ ಪ್ರಶಾಂತ್ ಕಾಮತ್, ಚಂದ್ರ ಮೊಗವೀರ, ಉದಯ ಸಾಲ್ಯಾನ್, ಕೃಷ್ಣ ಎಲ್. ಶೆಟ್ಟಿ, ರಾಜಶೇಖರ್ ಅವರು ಗೋವುಗಳ ಹಸ್ತಾಂತರ ಮಾಡಲಿದ್ದಾರೆ.
ವಿಜಯ ಟೈಮ್ಸ್ ಇದರ ಮುಖ್ಯ ಸಂಪಾದಕರಾದ ವಿಜಯಲಕ್ಷ್ಮಿ ಶಿಬರೂರು, ಖ್ಯಾತ ಕ್ಯಾನ್ಸರ್ ವೈದ್ಯರಾದ ಡಾ. ಮೇಘನಾ ಶೆಟ್ಟಿ ನಿಟ್ಟೆ, ಹೈಕೋರ್ಟ್ ನ್ಯಾಯವಾದಿಗಳಾದ ದೀಕ್ಷಾ ಎನ್ ಅಮೃತೇಶ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.



















































