19 C
Udupi
Friday, February 13, 2026
spot_img
spot_img
HomeBlogಎಟಿಎಂನಲ್ಲಿ ಕ್ಯಾಷ್ ವಿತ್ ಡ್ರಾಯಲ್ ಇಂಟರ್ಚೇಂಜ್ ಶುಲ್ಕ ಏರಿಕೆ..!

ಎಟಿಎಂನಲ್ಲಿ ಕ್ಯಾಷ್ ವಿತ್ ಡ್ರಾಯಲ್ ಇಂಟರ್ಚೇಂಜ್ ಶುಲ್ಕ ಏರಿಕೆ..!

ನವದೆಹಲಿ: ಇನ್ನು ಮುಂದೆ ಎಟಿಎಂ ಇಂಟರ್ಚೇಂಜ್ ದರಗಳು ಹೆಚ್ಚಾಗಲಿದ್ದು ಶುಲ್ಕಗಳ ಹೆಚ್ಚಳಕ್ಕೆ ಆರ್ಬಿಐ ಅನುಮೋದನೆ ನೀಡಿ ಮೇ 1ರಿಂದ ಹೊಸ ಶುಲ್ಕಗಳು ಜಾರಿಗೆ ಬರಲಿವೆ.

ಬೇರೆ ಬ್ಯಾಂಕ್ಗಳ ಎಟಿಎಂಗಳಲ್ಲಿ ನಿಗದಿ ಮಾಡಿದ ಮಿತಿಗಿಂತ ಹೆಚ್ಚು ಸಂಖ್ಯೆಯಲ್ಲಿ ವಹಿವಾಟು ಮಾಡಿದರೆ ಆಗ ಪ್ರತೀ ಹೆಚ್ಚುವರಿ ವಹಿವಾಟಿಗೂ ಶುಲ್ಕ ವಿಧಿಸಲಾಗುತ್ತದೆ. ಕ್ಯಾಷ್ ಹಿಂಪಡೆಯುವ ವಹಿವಾಟು ಶುಲ್ಕವನ್ನು ಎರಡು ರೂನಷ್ಟು ಹೆಚ್ಚಿಸಲಾಗಿದೆ. ಬ್ಯಾಲನ್ಸ್ ಪರಿಶೀಲನೆ, ಸ್ಟೇಟ್ಮೆಂಟ್ ಪಡೆಯುವುದು ಇತ್ಯಾದಿ ಹಣಕಾಸು ಅಲ್ಲದ ವಹಿವಾಟಿಗೆ ಶುಲ್ಕವನ್ನು ಒಂದು ರೂನಷ್ಟು ಏರಿಸಲಾಗಿದೆ.

ವಹಿವಾಟು ಸಂಖ್ಯೆ ಮಿತಿ ಮೀರಿದ ಬಳಿಕ ಪ್ರತಿಯೊಂದು ಕ್ಯಾಷ್ ವಿತ್ಡ್ರಾಯಲ್ಗೂ ಇಂಟರ್ಚೇಂಜ್ ಶುಲ್ಕ 17 ರೂನಿಂದ 19 ರೂಗೆ ಹೆಚ್ಚಿಸಲಾಗಿದೆ. ನಾನ್ ಫೈನಾನ್ಷಿಯಲ್ ಟ್ರಾನ್ಸಾಕ್ಷನ್ಗೆ ಶುಲ್ಕವನ್ನು 6 ರೂನಿಂದ 7 ರೂಗೆ ಹೆಚ್ಚಿಸಲಾಗಿದೆ. ಮೇ 1ರಿಂದ ಈ ಹೊಸ ದರಗಳು ಜಾರಿಗೆ ಬರುತ್ತವೆ.

ಪ್ರತೀ ಬಾರಿ ನಾವು ಬೇರೆ ಬ್ಯಾಂಕ್ ಎಟಿಎಂ ಬಳಸಿದಾಗ ನಿಮ್ಮ ಬ್ಯಾಂಕ್ ಇಂಟರ್ಚೇಂಜ್ ಶುಲ್ಕ ಪಾವತಿಸುತ್ತದೆ. ಗ್ರಾಹಕರಿಗೆ 3 ಬಾರಿ ಉಚಿತ ವಹಿವಾಟು ಇರುತ್ತದಾದರೂ ಬ್ಯಾಂಕ್ ಶುಲ್ಕ ಪಾವತಿಸಲೇಬೇಕಾಗುತ್ತದೆ. ಹೀಗಾಗಿ, ಉಚಿತ ವಹಿವಾಟು ಮಿತಿ ಮೀರಿದ ಬಳಿಕ ಗ್ರಾಹಕರಿಗೆ ಹೆಚ್ಚಿನ ಇಂಟರ್ಚೇಂಜ್ ಶುಲ್ಕವನ್ನು ಬ್ಯಾಂಕುಗಳು ವಿಧಿಸುತ್ತವೆ.

ಈಗ ಆರ್ಬಿಐ ಈ ಇಂಟರ್ಚೇಂಜ್ ಶುಲ್ಕ ಹೆಚ್ಚಿಸಿರುವುದರಿಂದ ಬ್ಯಾಂಕುಗಳೂ ಕೂಡ ಗ್ರಾಹಕರಿಗೆ ಶುಲ್ಕ ಏರಿಸುತ್ತವೆ. ಕ್ಯಾಷ್ ವಿತ್ಡಾಯಲ್ಗೆ 23 ರೂ, ಬ್ಯಾಲನ್ಸ್ ಚೆಕಿಂಗ್ ಇತ್ಯಾದಿ ಹಣಕಾಸೇತರ ಟ್ರಾನ್ಸಾಕ್ಷನ್ಗೆ 8 ರೂ ಆಗಬಹುದು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page