
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾ ಗೆ ಒಂದು ಲಕ್ಷ ಡಾಲರ್ ಪ್ರಕಟಿಸಿದ್ದು ಹೀಗಾಗಿ ಶ್ವೇತ ಭವನದ ಹೊಸ ಘೋಷಣೆಯ ಪ್ರಕಾರ ಹೊಸ ಆದೇಶದ ಅನ್ವಯ ಕಂಪನಿಗಳು ಎಚ್ -1ಬಿ ವೀಸಾ ಪ್ರಾಯೋಜಕ ಅರ್ಜಿದಾರರಿಗೆ ಸುಮಾರು 90 ಲಕ್ಷ ರೂಪಾಯಿ ಅಂದರೆ ಒಂದು ಲಕ್ಷ ಡಾಲರ್ ಪಾವತಿಸಬೇಕಾಗುತ್ತದೆ ಎಂದು ಶುಕ್ರವಾರ ತಮ್ಮ ಓವಲ್ ಆಫೀಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಟ್ರಂಪ್ ‘ಕಂಪನಿಗಳಿಗೆ ಕೆಲಸಗಾರರು ಬೇಕು, ನಮಗೆ ಶ್ರೇಷ್ಠ ಕೆಲಸಗಾರರು ಬೇಕು. ಹೊಸ ಆದೇಶವು ಅಮೇರಿಕಾ ಹೊಸದಾಗಿ ಶ್ರೇಷ್ಠ ಕೆಲಸಗಾರರನ್ನು ಪಡೆಯಲು ಅನುಕೂಲವಾಗಲಿದೆ’ ಎಂದು ಹೇಳಿದರು.
ಈ ಉದ್ಯೋಗ ವೀಸಾ ಮೂಲಕ ಸಾವಿರಾರು ಮಂದಿ ಭಾರತೀಯರು ಅಮೆರಿಕಕ್ಕೆ ಪ್ರವೇಶ ಪಡೆಯುತ್ತಾರೆ. ಮುಖ್ಯವಾಗಿ ಐಟಿ ಕಂಪನಿಗಳು ಈ ವೀಸಾವನ್ನು ಪ್ರಾಯೋಜಿಸುತ್ತವೆ. ಈ ಹೊಸ ಆದೇಶವು ಅಮೆರಿಕನ್ ಉದ್ಯೋಗಿಗಳಿಗೆ ಅನುಕೂಲವಾಗಲಿದ್ದು ಅತ್ಯಧಿಕ ಕೌಶಲ ಹೊಂದಿರುವ ಉದ್ಯೋಗಿಗಳನ್ನು ಮಾತ್ರ ಅಮೇರಿಕಕ್ಕೆ ಕರೆತರುವಂತೆ ಮಾಡುತ್ತದೆ. ಇದರಿಂದಾಗಿ ಅಮೇರಿಕಾದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಅಮೆರಿಕದಲ್ಲಿ ತರಬೇತಿಗೊಳಿಸುವುದು ಕಷ್ಟವಾಗಲಿದೆ. ಸರ್ಕಾರಕ್ಕೆ ಒಂದು ಲಕ್ಷ ಡಾಲರ್ ಪಾವತಿಸಿ ಉದ್ಯೋಗಿಗಳನ್ನು ಹೊರದೇಶಗಳಿಂದ ಕರೆತರುವುದು ಕಾರ್ಯಸಾಧು ಎನಿಸುವುದಿಲ್ಲ. ನೀವು ತರಬೇತಿ ನೀಡುವುದಿದ್ದರೆ ನಮ್ಮ ನೆಲದ ವಿಶ್ವವಿದ್ಯಾನಿಲಯಗಳ ಹೊಸ ಪದವೀಧರರನ್ನು ತರಬೇತುಗೊಳಿಸಿ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.









