26.9 C
Udupi
Tuesday, July 8, 2025
spot_img
spot_img
HomeBlogಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ:ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮ

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ:ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮ

ಸೋಲು ಜೀವನದ ಅಂತ್ಯವಲ್ಲ ಯಶಸ್ಸಿನ ಆರಂಭ”-ಮಿಥುನ್ ರೈ ಕೆ

‘ಶಾಲಾ ಸಂಸತ್ತು ನಾಯಕತ್ವದ ಬೆಳವಣಿಗೆಗೆ ಅಡಿಪಾಯವನ್ನು ಒದಗಿಸುವ ವೇದಿಕೆ. ಕೈಯ ಐದು ಬೆರಳುಗಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬನಲ್ಲಿಯೂ ಒಂದೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಸೋಲು ಜೀವನದ ಅಂತ್ಯವಲ್ಲ ಅದು ಯಶಸ್ಸಿನ ಆರಂಭ’ ಎಂದು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕೆ ಅಭಿಪ್ರಾಯ ಪಟ್ಟರು. ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯಲ್ಲಿ ದಿನಾಂಕ 08-ಜುಲೈ2025 ರ ಮಂಗಳವಾರದಂದು ಜರಗಿದ ಶಾಲಾ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ‘ವೇದಿಕೆಯ ಮೇಲಿರುವವರು ಮಾತ್ರ ನಾಯಕರಲ್ಲ ಮುಂಭಾಗದಲ್ಲಿರುವವರು ನಾಯಕರಾಗುವ ಯೋಗ್ಯತೆಯನ್ನು ಹೊಂದಿರುತ್ತಾರೆ. ಗುರುಕುಲ ಶಿಕ್ಷಣ ವ್ಯವಸ್ತೆ ಇರುವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆೆ ಉಜ್ವಲ ಭವಿಷ್ಯವಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ಶ್ರೀಯುತ ಜಿನೇಂದ್ರ ಕುಮಾರ್ ಅವರು ಮಾತನಾಡುತ್ತಾ ‘ಜೀವನದಲ್ಲಿ ಯಾವ ಹುದ್ದೆಯು ಅಧಿಕಾರವಲ್ಲ, ಅದು ಜವಬ್ದಾರಿಯಾಗಿದೆ. ಸಂವಿಧಾನವು ಹಕ್ಕುಗಳಿಗೆ ಮಾತ್ರ ಸೀಮಿತವಲ್ಲ, ಅದರಲ್ಲಿ ಕರ್ತವ್ಯಗಳು ಕೂಡ ಇದೆ. ಪ್ರತಿಯೊಬ್ಬರೂ ಅವರ ವಯಸ್ಸಿಗನುಗುಣವಾಗಿ ದೇಶಸೇವೆಯನ್ನು ಮಾಡಬೇಕು. ಸಾರ್ವಜನಿಕ ಸಂಪತ್ತನ್ನು ರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾದುದು. ಇಲ್ಲಿ ಗೆದ್ದವನು ನಾಯಕನಲ್ಲ ಬಿದ್ದವನನ್ನು ಮೇಲೆತ್ತುವವ ನಿಜವಾದ ನಾಯಕ’ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಯುವರಾಜ್ ಜೈನ್ ಅವರು ವಿದ್ಯಾರ್ಥಿ ಸಂಸತ್ತು ಕಲಿಕೆಯನ್ನು ಪಾಯೋಗಿಕವಾಗಿ ಅನುಭವಿಸುವ ಒಂದು ಉತ್ತಮ ವೇದಿಕೆಯಾಗಿದ್ದು, ಅದು ನಾಯಕತ್ವ ಮತ್ತು ಜವಬ್ದಾರಿಯ ಮೌಲ್ಯವನ್ನು ಬೆಳೆಸುತ್ತದೆ. ವ್ಯಕ್ತಿಯ ವರ್ತನೆ, ನಡತೆಗಳೇ ವ್ಯಕ್ತಿತ್ವದ ಮಾನದಂಡವಾಗಿದೆ. ಉತ್ತಮ ಸಂಸ್ಕಾರಗಳನ್ನುಮೈಗೂಡಿಸಿಕೊಂಡಾಗ ಮಾತ್ರ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.

ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್ ಅವರುಮಾತನಾಡುತ್ತಾ ಸಿಕ್ಕ ಜವಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತ ಸಮಾಜದ ಶ್ರೇಯಸ್ಸಿಗೆ ಕಾರಣರಾಗಬೇಕು. ಇಂದು ನಿಮಗೆ ಸಿಕ್ಕ ಸ್ಥಾನ ಭಾರತೀಯ ಸಂಸತ್ತನ್ನೇರಲು ಪ್ರಥಮ ಮೆಟ್ಟಿಲಾಗಲಿ. ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಿಥುನ್ ರೈ ಹಾಗೂ ಜಿನೇಂದ್ರ ಕುಮಾರ್ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಹಾಗೂ ನಾಗರಿಕ ಕರ್ತವ್ಯದ ಹೊಣೆಗಾರಿಕಾ ಫಲಕವನ್ನು ವಿವಿಧ ವಿಭಾಗದ
ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ ಭಟ್, ಉಪಮುಖ್ಯೋಪಾಧ್ಯಾಯರಾದ ಜಯಶೀಲ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ವೆನೆಸ್ಸಾ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಹಿತೇಶ್ ನಾಯಕ್ ಸ್ವಾಗತಿಸಿ ರೀನಲ್ ರಿನ್ಸಿಯಾ ಸೆರಾವೋ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page