
ವ್ಯಾಯಾಮವು ಅತ್ಯುತ್ತಮ ಆರೋಗ್ಯ ಹಾಗೂ ಏಕಾಗ್ರತೆ ಹೆಚ್ಚಿಸಲು , ಪರಿಣಾಮಕಾರಿ ಯಾದ ಮದ್ದು . ನಿಯಮಿತವಾಗಿ ವ್ಯಾಯಾಮ ಮಾಡುವ ಜನರು ತಮ್ಮ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು. ವ್ಯಾಯಾಮ ಮಾಡುವ ಮೂಲಕ, ಸಕ್ರಿಯ ಜನರು ನಿಷ್ಕ್ರಿಯ ಜನರಿಗಿಂತ ಎರಡು ವರ್ಷಗಳಷ್ಟು ತಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತಾರೆ ಎಂದು ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ನೀರಿಕ್ಷಣಾಧಿಕಾರಿ ವಸಂತ ಶೆಟ್ಟಿ ಹೇಳಿದರು ಅವರು ಮಂಗಳವಾರ ಎಂ ಪಿ ಎಂ ಕಾಲೇಜು ಎನ್ ಎಸ್ ಎಸ್ ಘಟಕ , ಮರ್ಣೆ ಗ್ರಾಮ ಪಂಚಾಯತಿ, ಬಾಂಧವ್ಯ ಯುವಕ ಮಂಡಲ ಮಂಗಳಾನಗರ ಅಜೆಕಾರು, ಎಸ್ ಕೆ ಡಿ ಅರ್ ಡಿ ಪಿ, ಹಾಗೂ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ದ ಸಹಯೋಗದಲ್ಲಿ ಅಜೆಕಾರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಾಯಾಮವು ವ್ಯಕ್ತಿಯ ಭಾವನಾತ್ಮಕ ಸಮತೋಲನವನ್ನು ಬೆಳೆಸಿಕೊಳ್ಳಲು ಪಾತ್ರವಹಿಸುತ್ತದೆ ,ಆರೋಗ್ಯವೇ ನಮ್ಮ ಆಸ್ತಿಯಾಗಿರಲಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೇವಾ ಪ್ರತಿನಿಧಿ ವಿಜಯ ನಾಯಕ್ ಮಾತನಾಡಿ ಉತ್ತಮ ಅರೋಗ್ಯ ರೂಪಿಸಿದರೆ ಮಾತ್ರ ನಮ್ಮ ಮುಂದಿನ ಜೀವನ ಉತ್ತಮವಾಗಿಸಬಹುದಾಗಿದೆ.ಮನುಷ್ಯನ ಹಣಗಳಿಕೆಯೆ ಮೂಲೊದ್ದೇಶವಾದರೆ ಅರೋಗ್ಯ ವನ್ನು ಕಡೆಗಣಿಸಿದಂತೆ, ಉತ್ತಮ ಆರೋಗ್ಯ ವಿದ್ದರೆ ಮಾತ್ರ ನಾಳೆ ಹಣವನ್ನು ಸಂಪಾದಿತ ಬಹುದಾಗಿದೆ ಎಂದರು.
ಮರ್ಣೆಗ್ರಾಮ ಪಂ ಸದಸ್ಯ ಗುರುಪ್ರಸಾದ್ ರಾವ್ ಮಾತನಾಡಿ ವ್ಯಕ್ತಿತ್ವ ರೂಪಿಸಲು ರ ಎನ್‌ಎಸ್ ಎಸ್ ಸಹಕಾರಿ ಯಾಗಿದೆ ಎಂದರು. ಭವ್ಯ ಭಾರತದ ಪ್ರಜೆಯಾಗಿ ಬಾಳಿ ಎಂದರು..
ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ನಾಯಕ್ ಅಧ್ಯಕ್ಷೆ ವಹಿಸಿದ್ದರು. ಮಂಗಳಾನಗರ ಬಾಂಧವ್ಯ ಯುವಕ ಮಂಡಲದ ಅಧ್ಯಕ್ಷ ಜಯಾನಂದ ಕುಲಾಲ್, ಹಾಗೂ ಕಾರ್ಯದರ್ಶಿ ಪ್ರತಾಪ್ ಕಾರ್ಯಕ್ರಮ ಶುಭಹಾರೈಸಿದರು. ಸಭೆಯಲ್ಲಿ ಕಾಲೇಜು ಎನ್ ಎಸ್ ಎಸ್ ಅಧಿಕಾರಿಗಳಾದ ಸೌಮ್ಯ , ಹಾಗೂ ಪ್ರಸನ್ನ ಉಪಸ್ಥಿತರಿದ್ದರು. ಸುಭೀಕ್ಷ ಕಾರ್ಯಕ್ರಮ ನಿರೂಪಿಸಿದರು.