27.7 C
Udupi
Monday, April 13, 2026
spot_img
spot_img
HomeBlogಎಂ.ಕೆ ವಿಜಯ್ ಕುಮಾರ್ ರವರಿಗೆ ,ಕಾರ್ಕಳ ಸ್ಕೌಟ್ ಗೈಡ್ಸ್ ಕಾರ್ಯಕಾರಿ ಸಮಿತಿಯಿಂದ ನುಡಿನಮನ

ಎಂ.ಕೆ ವಿಜಯ್ ಕುಮಾರ್ ರವರಿಗೆ ,ಕಾರ್ಕಳ ಸ್ಕೌಟ್ ಗೈಡ್ಸ್ ಕಾರ್ಯಕಾರಿ ಸಮಿತಿಯಿಂದ ನುಡಿನಮನ

ಭಾರತ್ ಸ್ಕೌಟ್ಸ್ ಗೈಡ್ಸ್ ಘಟಕ ಕಾರ್ಕಳ ಇದರ ಕಾರ್ಯಕಾರಿ ಸಮಿತಿಯ ವತಿಯಿಂದ ಇತ್ತೀಚೆಗೆ ಅಗಲಿದ ಹಿರಿಯ ನ್ಯಾಯವಾದಿ ಕಾರ್ಕಳ ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷ ಎಂ ಕೆ ವಿಜಯ ಕುಮಾರ್ ರವರಿಗೆ ನುಡಿನಮನ ಸಲ್ಲಿಸಲಾಯಿತು. ಕಾರ್ಯಕ್ರಮವು ಘಟಕದ ಉಪಾಧ್ಯಕ್ಷರಾದ ಜಗದೀಶ್ ಹೆಗ್ಡೆಯವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿಯವರು ಉಪಸ್ಥಿತರಿದ್ದು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯಲ್ಲಿ ನಡೆಸಿದ ಸೇವೆ ಹಾಗೆಯೇ ಕನ್ನಡ ನಾಡು ನುಡಿ ಅಭಿಮಾನ ಹೊಂದಿ ಸದಾ ಕನ್ನಡ ಸಾಹಿತ್ಯ ಪರ ಚಟುವಟಿಕೆಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡುತ್ತಿದ್ದ ಕಸಾಪ ಆಜೀವ ಸದಸ್ಯರು ಆಗಿದ್ದರು. ಎಂ ಕೆ ವಿ ಯವರ ವ್ಯಕ್ತಿತ್ವದ ಆದರ್ಶವು ನಮ್ಮೆಲ್ಲರಿಗೂ ಪ್ರೇರಣೆಯಾಗಿಸಿದೆ ಎಂದು ಹೇಳಿ ನುಡಿ ನಮನ ಸಲ್ಲಿಸಿದರು.

ನುಡಿನಮನ ಸಭೆಯಲ್ಲಿ ಉಡುಪಿ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ನ ಗೈಡ್ ಕಮೀಷನರ್ ಜ್ಯೋತಿ ಜೆ ಪೈ ಕಾರ್ಕಳ ಘಟಕದ ಉಪಾಧ್ಯಕ್ಷೆ ಸಾವಿತ್ರಿ ಮನೋಹರ್ ಉಪಾಧ್ಯಕ್ಷ ಜಗದೀಶ್ ಹೆಗ್ಡೆ ಕೋಶಾಧಿಕಾರಿ ಸತೀಶ್ ಶೆಟ್ಟಿ ಎಡಿಸಿಗಳಾದ ವೃಂದಾ ಹರಿಪ್ರಕಾಶ್ ಶೆಟ್ಟಿ ಗೀತಾ ಸುಧೀರ್ ಕಾಮತ್ ಜೊತೆ ಕಾರ್ಯದರ್ಶಿ ಸೀಮಾ ಕಾಮತ್ ಹಾಗೂ ನಿಕಟಪೂರ್ವ ಕಾರ್ಯದರ್ಶಿ ನವೀನ್ ಕುಮಾರ್ ಹಾಗೂ ಘಟಕದ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಹಾಗೂ ಜಗದೀಶ್ ಹೆಗ್ಡೆಯವರ ಮನೆ ಬಂಧುಗಳೂ ಉಪಸ್ಥಿತರಿದ್ದರು. ಸೇರಿದ ಸರ್ವರೂ ಎಂ ಕೆ ವಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ತಮ್ಮ ನುಡಿ ನಮನವನ್ನು ಸಲ್ಲಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page