
ಎಂ. ಕೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ 3ನೇ ವರ್ಷದ ಗ್ರಾಮೀಣ ಕ್ರೀಡೋತ್ಸವ ಕೆಸರ್ ಡೊಂಜಿ ದಿನ ಕಾರ್ಯಕ್ರಮವು ದಿನಾಂಕ 4-08-2024 ರವಿವಾರ ಸಮಯ 9.30 ರಿಂದ ಮನ್ ಬೊಟ್ಟು ಗದ್ದೆ ಮಾವಿನಕಟ್ಟೆ ನಂದಳಿಕೆಯಲ್ಲಿ ನಡೆಯಲಿದೆ. ಫ್ರೀ ಪ್ರೈಮರಿ, ಪ್ರೈಮರಿ, ಹೈ ಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ ವೈಯುಕ್ತಿಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿರುವುದು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರುಷರಿಗೆ ಕಬ್ಬಡ್ಡಿ ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.











