24.6 C
Udupi
Saturday, February 28, 2026
spot_img
spot_img
HomeBlogಉದ್ಯೋಗ ಸಂಕಷ್ಟ ತೀವ್ರ: ನೇಮಕಾತಿ ವಿಳಂಬದ ವಿರುದ್ಧ ಯುವಕರ ಕಿಡಿ, ಸರ್ಕಾರಕ್ಕೆ ಅರವಿಂದ ಬೆಲ್ಲದ್ ಎಚ್ಚರಿಕೆ

ಉದ್ಯೋಗ ಸಂಕಷ್ಟ ತೀವ್ರ: ನೇಮಕಾತಿ ವಿಳಂಬದ ವಿರುದ್ಧ ಯುವಕರ ಕಿಡಿ, ಸರ್ಕಾರಕ್ಕೆ ಅರವಿಂದ ಬೆಲ್ಲದ್ ಎಚ್ಚರಿಕೆ

ಧಾರವಾಡ: ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ ಹಾಗೂ ಆಡಳಿತದ ನಿಧಾನಗತಿಯ ವಿರುದ್ಧ ಯುವಕರ ಅಸಮಾಧಾನ ಹೆಚ್ಚುತ್ತಿದ್ದು ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ನೇಮಕಾತಿ ಪ್ರಕ್ರಿಯೆ ವೇಗಗೊಳಿಸುವಂತೆ ಆಗ್ರಹಿಸಿ ಭಾರೀ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ಸಮಸ್ಯೆಗಳತ್ತ ಗಮನ ಸೆಳೆದಿದ್ದಾರೆ.

ತಮ್ಮ ಪತ್ರದಲ್ಲಿ ರಾಜ್ಯ ಸರ್ಕಾರ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ವಿಫಲವಾಗಿದೆ ಎಂದು ಬೆಲ್ಲದ್ ಆರೋಪಿಸಿದ್ದಾರೆ. ಲಕ್ಷಾಂತರ ಮಂದಿ ಉದ್ಯೋಗದ ನಿರೀಕ್ಷೆಯಲ್ಲಿ ಹತಾಶರಾಗಿದ್ದು, ಧಾರವಾಡದ ಪ್ರತಿಭಟನೆ ವೇಳೆ ಅವರ ಕೋಪ ಮತ್ತು ಆತಂಕ ಸ್ಪಷ್ಟವಾಗಿ ಗೋಚರಿಸಿತು ಎಂದು ತಿಳಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲವಿದ್ದು, ಅವರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಹೇಳಿದ ಅವರು ಸರ್ಕಾರ ಸಮರ್ಪಕ ಉತ್ತರ ನೀಡುವ ಬದಲು ಲಾಠಿ ಚಾರ್ಜ್‌ಗೆ ಮುಂದಾಗಿರುವುದು ಖಂಡನೀಯ. ಲಭ್ಯ ಮಾಹಿತಿಯ ಪ್ರಕಾರ, 2.86 ಲಕ್ಷ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದ ಸರ್ಕಾರ, ಕಳೆದ ಮೂರು ವರ್ಷಗಳಲ್ಲಿ 10 ಸಾವಿರಕ್ಕೂ ಕಡಿಮೆ ಹುದ್ದೆಗಳನ್ನು ಮಾತ್ರ ತುಂಬಿದೆ. 8,157 ನೇಮಕಾತಿಗಳು ಪೂರ್ಣಗೊಂಡಿರುವುದರಿಂದ ಸ್ಪಷ್ಟ ಸಮಯರೇಖೆ ಮತ್ತು ಪಾರದರ್ಶಕ ಯೋಜನೆಗಳ ಕೊರತೆ ಯುವಜನರಲ್ಲಿ ನಿರಾಸೆ ಮೂಡಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವು ನೇಮಕಾತಿಗಳು ವೇಗವಾಗಿ ನಡೆದಿದ್ದವು ಎಂದು ಅವರು ಹೇಳಿದ್ದಾರೆ. 16 ಸಾವಿರ ಶಿಕ್ಷಕರ ಹುದ್ದೆಗಳ ಪ್ರಕಟಣೆ, 6 ಸಾವಿರ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ಗಳು, 4 ಸಾವಿರ CAR ಸಿಬ್ಬಂದಿ, 545 PSI ಹಾಗೂ 402 PSI ಹುದ್ದೆಗಳ ಭರ್ತಿಯನ್ನು ಉದಾಹರಣೆಯಾಗಿ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page