
ಜೂನ್ 8ರಂದು ಆದಿತ್ಯವಾರದಂದು, ಉದಯ ಶೆಟ್ಟಿ ಮುನಿಯಾಲು ಇವರ ಹುಟ್ಟು ಹಬ್ಬದ ಪ್ರಯುಕ್ತ ಉದಯ ಶೆಟ್ಟಿ ಅಭಿಮಾನಿ ಬಳಗ ಕಾರ್ಕಳ ಮತ್ತು ಬ್ಲಾಕ್ ಕಾಂಗ್ರೆಸ್ ಕಾರ್ಕಳ ಹೆಬ್ರಿ ಹಾಗೂ ಡಾ| ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಲಿದೆ.
ಮೂಡು ಗಣಪತಿ ದೇವಸ್ಥಾನದ ಸಭಾಂಗಣ ಬಂಡಿ ಮಠದಲ್ಲಿ ಬೆಳಗ್ಗೆ 9:30 ರಿಂದ 12:30 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ,ರಕ್ತದಾನ ಶಿಬಿರದ ಜೊತೆಗೆ ಉಚಿತ ಹೃದಯ ರೋಗ, ಸಾಮಾನ್ಯ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಕೂಡ ನಡೆಯಲಿದೆ.
ಕಾರ್ಕಳ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾಭ್ಯಾಸದ ಎಸ್ ಎಸ್ ಎಲ್ ಸಿ ಹಾಗೂ ಕಾರ್ಕಳ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾಭ್ಯಾಸದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮ ಕೂಡ ನಡೆಯಲಿದೆ.



















































