
ಉಡುಪಿ: ಪುತ್ತೂರಿನಲ್ಲಿ ಹೆಂಡತಿ ಮಗುವಿನ ಜೊತೆ ಮನೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರನ್ನು ಮೂವರು ದುಷ್ಕರ್ಮಿಗಳು ತಲ್ವಾರ್‌ನಿಂದ ಕೊಚ್ಚಿ ಕೊಂದ ಅಮಾನವೀಯ ಘಟನೆ ನಡೆದಿದೆ.
ವಿನಯ್ ದೇವಾಡಿಗ (35) ಎಂಬಾತ ಮೃತ ದುರ್ದೈವಿಯಾಗಿದ್ದು ರಾತ್ರಿ ವೇಳೆ ಮೂವರು ದುಷ್ಕರ್ಮಿಗಳು ವಿನಯ್ ಅವರ ಮನೆಗೆ ಬಂದಿದ್ದರು. ಈ ವೇಳೆ, ಸ್ನೇಹಿತರಿರಬಹುದು ಎಂದು ಮನೆಯವರು ಒಳಗೆ ಬಿಟ್ಟಿದ್ದು ಆ ಬಳಿಕ ಮೂವರು ದುಷ್ಕರ್ಮಿಗಳು ಹೆಂಡತಿ ಮತ್ತು ಮಗುವಿನ ಜೊತೆ ಮಲಗಿದ್ದ ವಿನಯ್ ಮೇಲೆ ತಲ್ವಾರ್‍ನಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ದಾಳಿ ವೇಳೆ ತಡೆಯಲು ಹೋದ ಪತ್ನಿಗೆ ಸಹ ಗಾಯವಾಗಿದ್ದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.