
ಉಡುಪಿ ಜ್ಞಾನಸುಧಾ : ಚೆಸ್ನಲ್ಲಿ ರಾಜ್ಯಮಟ್ಟಕ್ಕೆಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು, ಚೇರ್ಕಾಡಿ ಇವರಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಚದುರಂಗಸ್ಪರ್ಧೆಯಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ಯ ಎಸ್ ಹೇಮಂತ್ ಬಾಲಾಜಿ ತೃತೀಯಸ್ಥಾನ, ದ್ವಿತೀಯ ಪಿ.ಯು.ಸಿ.ಯ ಮಹಿನ್ ಕೆ ಐದನೇಸ್ಥಾನವನ್ನು ಪಡೆದು ರಾಜ್ಯಮಟ್ಟದ ಚೆಸ್ ಪಂದ್ಯಾಟಕ್ಕೆಆಯ್ಕೆಯಾಗಿರುತ್ತಾರೆ.
ಇವರನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ,ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.









