31 C
Udupi
Thursday, February 19, 2026
spot_img
spot_img
HomeBlogಉಡುಪಿ ಜ್ಞಾನಸುಧಾ : ಜೆಇಇ ಮೈನ್ ಸಾಧಕರಿಗೆ ಸನ್ಮಾನ

ಉಡುಪಿ ಜ್ಞಾನಸುಧಾ : ಜೆಇಇ ಮೈನ್ ಸಾಧಕರಿಗೆ ಸನ್ಮಾನ

ಶೈಕ್ಷಣಿಕ ಜೀವನದಲ್ಲಿ ಉತ್ತಮ ಅಂಕಗಳೊಂದಿಗೆ ಶಿಸ್ತು, ಬಹಳ ಮುಖ್ಯ. ಹೆತ್ತವರ ಎದುರು ಸನ್ಮಾನ ಸ್ವೀಕರಿಸುವುದೇ ನಿಜವಾದ ಸಾಧನೆ. ಬದುಕಿಗೆ ಉಸಿರು ಕೊಟ್ಟವರ ಕನಸನ್ನು ನನಸಾಗಿಸುವ ಹೆಮ್ಮೆಯ ಮಕ್ಕಳು ನೀವಾಗಿ ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಹೇಳಿದರು. ಇವರು ಉಡುಪಿ ಜ್ಞಾನಸುಧಾದಲ್ಲಿ ಜೆಇಇ ಮೈನ್ (ಬಿ.ಟೆಕ್) – 2026ರ ಮೊದಲ ಹಂತದ ಫಲಿತಾಂಶದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜೆಇಇ ಮೈನ್‌ನಲ್ಲಿ(ಬಿ.ಟೆಕ್) 2026ರ ಮೊದಲ ಹಂತದ ಫಲಿತಾಂಶದಲ್ಲಿ 97ಕ್ಕಿAತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 99.8254499 ಪರ್ಸಂಟೈಲ್ ಪಡೆದ ಸೋಹನ್ ಗಿರಿರಡ್ಡಿ ಇವರಿಗೆ ರೂ 75 ಸಾವಿರ, 99.6543996 ಪರ್ಸಂಟೈಲ್ ಪಡೆದ ಮೇಧಾನ್ಶ್ ಎನ್ ಬಿ ಹಾಗೂ 99.6130095 ಪರ್ಸಂಟೈಲ್ ಪಡೆದ ಅನಿರುದ್ಧ್ ಆರ್ ಉಡುಪ ಇವರಿಗೆ ತಲಾ ರೂ 35
ಸಾವಿರ, 99.0090928 ಪರ್ಸಂಟೈಲ್ ಪಡೆದ ಅನಿಕೇತ್ ಆರ್ ಉಡುಪ ಇವರಿಗೆ ರೂ 15 ಸಾವಿರ, 98.4810184 ಪರ್ಸಂಟೈಲ್ ಪಡೆದ ಅನಮಯ ಯೋಗೀಶ್ ದಿವಾಕರ್, 98.4287569 ಪರ್ಸಂಟೈಲ್ಪ ಡೆದ ವಿದ್ವತ್ ವಿ ಕಾಮತ್, 98.4281519 ಪರ್ಸಂಟೈಲ್ ಪಡೆದ ಪ್ರಭಂಜನ್ ಭಟ್ ಇವರಿಗೆ ತಲಾ ರೂ 1 ಸಾವಿರ , 97.6626415 ಪರ್ಸಂಟೈಲ್ ಪಡೆದ ಮಾಧವ ಕಾಮತ್ ಮತ್ತು 97.1499458 ಪರ್ಸಂಟೈಲ್ಪ ಡೆದ ಪ್ರದೀಪ ಪದ್ಮಶಾಲಿ ಇವರುಗಳಿಗೆ ತಲಾ 500 ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಈ
ಮೂಲಕ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನಿಂದ ಉಡುಪಿ ಜ್ಞಾನಸುಧಾದ ಸಾಧಕರಿಗೆ 1.64ಲಕ್ಷ ಪ್ರೋತ್ಸಾಹ ಧನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ್ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ಶ್ರೀಮತಿ ವಿದ್ಯಾ ಸುಧಾಕರ ಶೆಟ್ಟಿ, ಉಡುಪಿ ಜ್ಞಾನಸುಧಾದ ಪ್ರಾಂಶುಪಾಲರಾದ ಸಂತೋಷ್, ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಆದ ಡಾ. ಮಿಥುನ್ ಯು, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಹಸಂಯೋಜಕರಾಪ್ರವೀಣ್ ಜೋನ್ ಡಿ ಅಲ್ಮೆಡಾ, ಎಲ್ಲಾ ವಿಭಾಗಗಳ ವಿಭಾಗ
ಮುಖ್ಯಸ್ಥರು, ಉಪನ್ಯಾಸಕರು, ಉಪನ್ಯಾಸಕೇತರ ಬಂಧುಗಳು ಉಪಸ್ಥಿತರಿದ್ದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page