
ಉಡುಪಿ: ವೃತ್ತಿಯಿಂದ ವೈದ್ಯರಾಗಿದ್ದು, ತಮ್ಮ ವಿಭಿನ್ನ ಹಾಡುಗಾರಿಕೆಗೆ ಹಾಗೂ ಫಿಟ್ನೆಸ್ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದ ಡಾ ಸತೀಶ್ ಪೂಜಾರಿ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
54 ವರ್ಷದ ಸತೀಶ್ ಪೂಜಾರಿ ಅವರು ಕುಂದಾಪುರದಲ್ಲಿ ಶ್ರೀಮಾತಾ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿದ್ದು ಇದರ ಜೊತೆ ಜೊತೆಗೆ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡು ಕುಂದಾಪುರ ಮತ್ತು ಉಡುಪಿ ಭಾಗಗಳಲ್ಲಿ ಪ್ರಖ್ಯಾತರಾಗಿದ್ದರು. ಇವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರು ಫಿಟ್ನೆಸ್ ಬಗ್ಗೆ ಕೂಡ ಅತೀವ ಕಾಳಜಿ ವಹಿಸುತ್ತಿದ್ದರು ಎನ್ನಲಾಗಿದೆ.





