
ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯವರು ಈ ವರ್ಷದ ಮಕರವಿಳಕ್ಕು ಉತ್ಸವಕ್ಕಾಗಿ ಮತ್ತೆ ದೇವಸ್ಥಾನವು ಡಿ.30ರ ಸಂಜೆ ಅಂದರೆ ಇಂದು 4 ಗಂಟೆಗೆ ದೇವಸ್ಥಾನವನ್ನು ತೆರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕ ತಂತ್ರಿ ಕಂಡಾರರು ರಾಜೀವರು ಸಮ್ಮುಖದಲ್ಲಿ ಮೇಲುಶಾಂತಿ ಎಸ್. ಅರುಣ್ ಕುಮಾರ್ ನಂಬೂತಿರಿ ದೇವಸ್ಥಾನವನ್ನು ತೆರೆಯಲಿದ್ದು ಗರ್ಭಗುಡಿಯಲ್ಲಿನ ಅಗ್ಗಿಷ್ಟಿಕೆ ಬೆಳಗಿಸಿದ ನಂತರ ಯಾತ್ರಾರ್ಥಿಗಳು ದರ್ಶನಕ್ಕಾಗಿ ಪವಿತ್ರ 18 ಮೆಟ್ಟಿಲುಗಳನ್ನು ಏರಬಹುದು. ಡಿ.26ರಂದು ರಾತ್ರಿ 10 ಗಂಟೆಗೆ ಮಂಡಲ ಪೂಜೆಯ ನಂತರ ಹರಿವರಾಸನಂ ಪಠಣದೊಂದಿಗೆ ದೇವಾಲಯವನ್ನು ಮುಚ್ಚಲಾಗಿತ್ತು.




