
ಬಿಗ್ಬಾಸ್ 12 ಮುಕ್ತಾಯದ ಹಂತದಲ್ಲಿದ್ದು, ಇನ್ನೇನು ಒಂದು ತಿಂಗಳಲ್ಲಿ ಮುಗಿಯಲಿದೆ. ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟನೇ ಈ ಬಾರಿಯ ವಿನ್ನರ್ ಎಂದು ಹೆಚ್ಚಿನ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಆದರೆ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಈ ಬಾರಿ ಗಿಲ್ಲಿ ನಟ ವಿನ್ ಆಗಲ್ಲ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಈಗಾಗಲೇ ಬಿಗ್ ಬಾಸ್ ನಿಂದ ಹೊರಕ್ಕೆ ಬಂದಿರುವ ಸ್ಪರ್ಧಿಗಳು, ಮಾಜಿ ಸ್ಪರ್ಧಿಗಳು ಸೇರಿದಂತೆ ಹಲವರ ಬಾಯಲ್ಲಿ ಗಿಲ್ಲಿ ನಟನ ಹೆಸರೇ ಕೇಳಿ ಬರುತ್ತಿದ್ದು ಆದರೆ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ತಮ್ಮ X ಖಾತೆಯಲ್ಲಿ ‘ಈ ಬಾರಿಯ ಬಿಗ್ ಬಾಸ್ ಗೆಲ್ಲೋದು ಗಿಲ್ಲಿ ನಟ ಅಲ್ಲ. ಈ ಬಾರಿಯ ಬಿಗ್ ಬಾಸ್ ಗೆಲ್ಲುವುದು ಓರ್ವ ಮಹಿಳೆ’ ಎಂದು ಹೇಳಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.





