
ಅಮೆರಿಕ ಇಸ್ರೇಲ್ ಜಂಟಿ ದಾಳಿಗಳು ಮುಂದುವರಿದಿದ್ದು ಈ ಅವಧಿಯಲ್ಲಿ 1,200 ಕ್ಕೂ ಹೆಚ್ಚು ಇರಾನಿಯರನ್ನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಂದರ್ಭ ಡೊನಾಲ್ಡ್ ಟ್ರಂಪ್, ನಾವು ಈಗಾಗಲೇ ಹಲವು ರೀತಿಯಲ್ಲಿ ಗೆಲುವು ಸಾಧಿಸಿದ್ದೇವೆ, ಆದರೆ ಯುದ್ಧವನ್ನು ಇನ್ನೂ ಸಂಪೂರ್ಣವಾಗಿ ಗೆದ್ದಿಲ್ಲ, ಇರಾನ್ ಸಂಪೂರ್ಣವಾಗಿ ಸೋಲೊಪ್ಪಿಕೊಳ್ಳುವವರೆಗೂ ಅಮೆರಿಕ ದಾಳಿ ಮುಂದುವರಿಸಲಿದೆ ಎಂದು ಹೇಳಿದ್ದಾರೆ.
ಯುದ್ಧದ ಆರಂಭದ ದಿನಗಳಲ್ಲಿ, ಅಲ್ಪಾವಧಿಯ ಯುದ್ಧ ಎಂದು ಘೋಷಣೆ ಮಾಡಿದ ಟ್ರಂಪ್ , ಬಳಿಕ ರಿಪಬ್ಲಿಕನ್ ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಕೆಲವರನ್ನು ನಿರ್ಣಾಮ ಮಾಡಬೇಕೆಂದು ನಾವು ತೀರ್ಮಾನಿಸಿದ್ದರಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.






