
ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜುಕೇಶನ್ ನಿಟ್ಟೆ ಎನ್ ಎಸ್ ಎಸ್ ವಿದ್ಯಾರ್ಥಿಗಳು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿದರು.
50 ಏನ್ ಎಸ್ ಎಸ್ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಏರ್ಪಡಿಸಿದರು.
ಶಾಲಾ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಹಸ್ತಾಂತರಿಸುವುದರೊಂದಿಗೆ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ರಶ್ಮಿ, ಎನ್ ಎಸ್ ಎಸ್ ಉಪಾಧ್ಯಕ್ಷ ಜಿತೇಶ್, ಕಾಲೇಜು ಪ್ರೆಸಿಡೆಂಟ್ ಕೌಶಿಕ್ ಶೆಟ್ಟಿ, ಸಂಸ್ಥಾಪಕಿ ಡಾ ಕಾಂತಿ ಹರೀಶ್, ಸಿ ಎಸ್ ಆರ್ ಹೆಡ್ ಪೀಟರ್, ಉಪಸ್ಥಿತರಿದ್ದರು.





