
ದಾವಣಗೆರೆ: ಮೊದಲ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಲಯವು ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ್ದು ಶರಣರು ಆಗಮಿಸುತ್ತಿದ್ದಂತೆ ಭಕ್ತರು, ಅಭಿಮಾನಿಗಳು, ಶಿವಯೋಗಿ ಮಂದಿರದ ಪದಾಧಿಕಾರಿಗಳು ಸಂಭ್ರಮಿಸಿದ್ದಾರೆ.
‘ಜೈ ಮುರುಗೇಶ’ ಎಂಬ ಘೋಷಣೆಯೊಂದಿಗೆ ಶರಣರನ್ನು ಬರಮಾಡಿಕೊಂಡ ಜನರು ಪರಸ್ಪರ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು. ಡಾ. ಶಿವಮೂರ್ತಿ ಮುರುಘಾ ಶರಣರು ಶಿವಯೋಗಿ ಮಂದಿರದ ಆವರಣದಲ್ಲಿರುವ ಬಸವಚೇತನ ಶ್ರೀ ಜಯದೇವ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಮತ್ತು ಅಥಣಿ ಮುರುಘೇಂದ್ರ ಸ್ವಾಮೀಜಿಯವರ ಕರ್ತೃ ಗದ್ದುಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಇನ್ನು ಸ್ವಲ್ಪ ದಿನ ಮೌನ ಕಾಪಾಡಿಕೊಳ್ಳಬೇಕಿದೆ. ಈಗ ಮಾತಾಡುವ ಸಂದರ್ಭ ಕಡಿಮೆ ಇದೆ. ನಿಮ್ಮೆನ್ನೆಲ್ಲಾ ಕರೆದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತೇವೆ’ ಎಂದು ಹೇಳಿದರು.






















































