
ಟಿಕೆಟ್ ಪ್ರಕ್ರಿಯೆಯಲ್ಲಿ ದುರುಪಯೋಗವನ್ನು ತಡೆಗಟ್ಟಲು ಮತ್ತು ಪಾರದರ್ಶಕತೆಯನ್ನು ಉತ್ತೇಜಿಸಲು ಭಾರತೀಯ ರೈಲ್ವೆ ಇಲಾಖೆಯು ಹೊಸ ನಿಮಯವನ್ನು ಕಡ್ಡಾಯವಾಗಿ ಪಾಲಿಸುವಂತೆ ಜಾರಿಗೊಳಿಸಿದ್ದು ಅದೇನೆಂದರೆ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಇತರ ಆ್ಯಪ್ಗಳಲ್ಲಿ ಟಿಕೆಟ್ ಬುಕಿಂಗ್ ಮಾಡಬೇಕಾದರೆ ಆಧಾರ್-ಲಿಂಕ್ ಮಾಡಿರಲೇಬೇಕು. ಒಂದು ವೇಳೆ ಲಿಂಕ್ ಮಾಡದಿದ್ದರೆ, ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ.
ಜತೆಗೆ IRCTC ಬಳಕೆದಾರರಿಗೆ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು ವಿಸ್ತರಿಸಲಾಗಿದ್ದು ಇನ್ನು ಈ ನಿಯಮ ರೈಲ್ವೆ ಕೌಂಟರ್‌ಗಳಲ್ಲಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ದಲ್ಲಾಳಿಗಳ ಪ್ರಭಾವವನ್ನು ಕಡಿಮೆ ಮಾಡಲು ಹಾಗೂ ಆನ್ಲೈನ್ ಬುಕ್ ಮಾಡಿದವರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಈ ಹೊಸ ನಿಯಮ ಜಾರಿಗೊಳಿಸಿದ್ದು ಇದರ ಅನ್ವಯ ಬೆಳಿಗ್ಗೆ 8:00 ರಿಂದ ಸಂಜೆ 4:00 ರವರೆಗೆ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅಂತಿಮ ಹಂತದಲ್ಲಿ, ಆಧಾರ್-ಲಿಂಕ್ ಮಾಡಿದ ಬಳಕೆದಾರರು ಬೆಳಿಗ್ಗೆ 8:00 ರಿಂದ ಮಧ್ಯರಾತ್ರಿ 12:00 ರವರೆಗೆ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ನೀಡಲಾಗುವುದು.
ವಿಸ್ಕೃತ ಬುಕಿಂಗ್ ಸಮಯದ ಮೂರು ಹಂತ:
ಹಂತ 1: ಆಧಾರ್-ಲಿಂಕ್ ಮಾಡಿದ ಬಳಕೆದಾರರಿಗೆ ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12:00 ರವರೆಗೆ ಟಿಕೆಟ್ ಬುಕ್ ಮಾಡಲು ಅವಕಾಶವಿತ್ತು.
ಹಂತ 2: ಬುಕಿಂಗ್ ವಿಂಡೋವನ್ನು ಈಗ ಬೆಳಿಗ್ಗೆ 8:00 ರಿಂದ ಸಂಜೆ 4:00 ರವರೆಗೆ ವಿಸ್ತರಿಸಲಾಗಿದೆ . ಆಧಾರ್ ಲಿಂಕ್ ಮಾಡದ ಬಳಕೆದಾರರು ಸಂಜೆ 4:00 ರ ನಂತರ ಮಾತ್ರ ಟಿಕೆಟ್ ಬುಕ್ ಮಾಡಬಹುದು.
ಹಂತ 3: ಬುಕಿಂಗ್ ವಿಂಡೋವನ್ನು ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ, ಆಧಾರ್-ಲಿಂಕ್ ಮಾಡಿದ ಬಳಕೆದಾರರು ಮಧ್ಯರಾತ್ರಿ 12:00 ರವರೆಗೆ ಟಿಕೆಟ್ ಬುಕ್ ಮಾಡಲು ಅವಕಾಶಗಳ ಮಾಡಿಕೊಡುತ್ತಾರೆ.
ಈ ಹಿಂದೆ ಭಾರತೀಯ ರೈಲ್ವೆ ಇಲಾಖೆ, ರೈಲು ಹೊರಡುವ 120 ದಿನಗಳ ಮೊದಲು ಟಿಕೆಟ್ ಬುಕಿಂಗ್‌ಗೆ ಅವಕಾಶ ನೀಡಿತ್ತು. ನವೆಂಬರ್ 2024ರಲ್ಲಿ, ಈ ಅವಧಿಯನ್ನು 60 ದಿನಗಳಿಗೆ ಇಳಿಸಲಾಯಿತು. ಇದೀಗ ಹೊಸ ನಿಯಮದ ಪ್ರಕಾರ, ಭಾರತೀಯ ರೈಲ್ವೆಯು ಆಧಾರ್-ಲಿಂಕ್ ಮಾಡಲಾದ ಗರಿಷ್ಠ IRCTC ಬಳಕೆದಾರರು ಮೊದಲ ದಿನವೇ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ.
ಆಧಾರ್ ಲಿಂಕ್ ಮಾಡಲು, IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಲಾಗಿನ್ ಆಗಿ ಬಳಿಕ ‘ಪ್ರೊಫೈಲ್’ ವಿಭಾಗಕ್ಕೆ ಹೋಗಿ ಮತ್ತು ಆಧಾರ್ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಟಿಕೆಟ್ ಕೌಂಟರ್‌ಗಳಲ್ಲಿಯೂ ಸಹ OTP ಪರಿಶೀಲನೆ ಕಡ್ಡಾಯವಾಗಿದ್ದು ಬುಕಿಂಗ್ ಅನ್ನು ಖಚಿತಪಡಿಸಲು ನಮ್ಮ ಫೋನ್‌ಗೆ OTP ಕಳುಹಿಸಲಾಗುವುದರಿಂದ ನಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಯಾವುದೇ ಬುಕಿಂಗ್ ಅಥವಾ ಒಟಿಪಿ ಸಂಬಂಧಿತ ಸಮಸ್ಯೆಗಳಿದ್ದಲ್ಲಿ, ಪ್ರಯಾಣಿಕರು ಐಆರ್‌ಸಿಟಿಸಿ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ದೂರು ದಾಖಲಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.



















