
ಬೆಂಗಳೂರು: ಮಾಜಿ ಕಮಿಷನರ್ ಭಾಸ್ಕರ್ ರಾವ್ ನಗರ ಪೊಲೀಸ್ ಕಮಿಷನರ್ ದಯಾನಂದ್ ಅಮಾನತು ವಿಚಾರಕ್ಕೆ “ಇದು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ” ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸತ್ಯ ಹೇಳಿದ್ದಕ್ಕೆ ಇದು ಬಹುಮಾನ. ಅವರು ಮತ್ತು ಅವರ ತಂಡ ಬೆಂಗಳೂರನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಶ್ರಮಿಸಿದ್ದರು. ಡೆತ್ ಮಾರ್ಚ್ ಅನ್ನು ಆಯೋಜಿಸಿ, ನಿಯಂತ್ರಿಸಲಾಗದ ಉಪಮುಖ್ಯಮಂತ್ರಿಯೆ ಪ್ರಮುಖ ಅಪರಾಧಿ. ಇದು ಕರ್ನಾಟಕದ ಎಲ್ಲರಿಗೂ ತಿಳಿದಿದೆ.
ಯಾವುದೇ ಮುಖ್ಯಮಂತ್ರಿ ಇಷ್ಟು ಅಸಹಾಯಕ, ಹೇಡಿ ಭಯಭೀತರಾಗಿರಲಿಲ್ಲ. ಸರ್ಕಾರವು ತನ್ನ ಕೈಗಳ ಮೇಲೆ ರಕ್ತವನ್ನು ಮೆತ್ತಿಕೊಂಡಿದ್ದು ಇದೀಗ ಮೆದುಳನ್ನು ಕೂಡ ಕಳೆದುಕೊಂಡಿದೆ. ಸರ್ಕಾರವು ಈಗ ವಿಪತ್ತಿನಲ್ಲಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.





