
ಕರ್ನಾಟಕ ಹೈಕೋರ್ಟ್ ರೇಣುಕಾ ಸ್ವಾಮಿ ಕೊಲೆ ಕೇಸ್ ಆರೋಪಿಗಳಾದ ದರ್ಶನ್ ಪವಿತ್ರಾ ಸೇರಿದಂತೆ ಏಳು ಆರೋಪಿಗಳಿಗೆ ಜಾಮೀನು ನೀಡಿದ್ದು ಇದೀಗ ಸರ್ಕಾರವು ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಡೀ ಪ್ರಕರಣ ನಡೆಯಲು ನೀವೇ ಕಾರಣ ಅಲ್ಲವೇ ಎಂದು ಪವಿತ್ರಾಗೆ ನೇರವಾಗಿ ಪ್ರಶ್ನಿಸಿ ಸದ್ಯ ಆದೇಶವನ್ನು ಕಾಯ್ದಿರಿಸಿದೆ.
ಪವಿತ್ರಾ ಗೌಡ ಪರ ವಾದ ಮಂಡಿಸಿದ ವಕೀಲೆ, ‘ಪವಿತ್ರಾ ಗೌಡ ಅವರಿಂದ ರೇಣುಕಾಸ್ವಾಮಿಗೆ ಒಂದೇ ಒಂದು ಗಾಯವೂ ಆಗಿಲ್ಲ. ಚಪ್ಪಲಿಯಿಂದ ಹೊಡೆದಿದ್ದಾರೆಂಬ ಒಂದು ಹೇಳಿಕೆ ಮಾತ್ರವಿದೆ’ ಎಂದು ವಾದಿಸಿದರು. ಇದಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರು ‘ಈ ಕೇಸ್ ಆಗಲು ನೀವೇ ಕಾರಣ ಅಲ್ಲವೇ?. ನೀವಿಲ್ಲದಿದ್ದರೆ A2 ದರ್ಶನ್ ಆಸಕ್ತಿ ವಹಿಸುತ್ತಿರಲಿಲ್ಲ. ಇಷ್ಟೆಲ್ಲಾ ಆಗಲು ನೀವೇ ಕಾರಣ ಅಲ್ಲವಾ’ ಎಂದು ನೇರವಾಗಿ ಕೇಳಿದರು.
‘ನಾವು ಆರೋಪಿಗೆ ಶಿಕ್ಷೆ ನೀಡುವುದಿಲ್ಲ, ದೋಷಮುಕ್ತ ಮಾಡುವುದಿಲ್ಲ. ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ’ ಎಂದು ಹೇಳಿ ದರ್ಶನ್ ಕೇಸ್ನಲ್ಲಿ ಹೈಕೋರ್ಟ್ ಆದೇಶ ನೀಡುವಾಗ ವಿವೇಚನೆ ಬಳಸಿಲ್ಲ ಎಂಬ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.