
ಮೈಸೂರು: ಇಂದು ಮಹಿಷ ದಸರಾ ಆಚರಣೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಸಂಭ್ರಮದಲ್ಲಿ ನಿತ್ಯ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ದಸರಾ ರಂಗನ್ನ ಹೆಚ್ಚಿಸುತ್ತಿವೆ. ಪ್ರತಿವರ್ಷದಂತೆ ಈ ವರ್ಷವು ವಿಂಟೇಜ್ ಕಾರುಗಳು ದಸರಾ ರಂಗನ್ನ ಹೆಚ್ಚಿಸಿದ್ದು, ಜನರನ್ನ ಆಕರ್ಷಿಸುತ್ತಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿ ಆಯೋಜಿಸಿರುವ ಈ ಕಾರುಗಳ ಪ್ರದರ್ಶನದಲ್ಲಿ 1905ರ ಕಾರ್ ಮಾಡೆಲ್ ನಿಂದ 2025ರ ಮಾಡೆಲ್ ವರೆಗೂ ಕಾರುಗಳ ಕಾಣಸಿಗುತ್ತಿವೆ. ಇದರಲ್ಲಿ ಹಲವು ಕಾರುಗಳು ವಿದೇಶದಲ್ಲಿ ಮಾತ್ರ ಬಳಕೆಯಲ್ಲಿದ್ದಂತವು. ಇನ್ನೂ ಕೆಲವು ಭಾರತದ ರಸ್ತೆಗಳಲ್ಲಿ ಘರ್ಜಿಸಿ ಮರೆಯಾದವು. ಇನ್ನೂ ಕೆಲವು ರಾಜ ಮಹರಾಜರು ಬಳಸಿದ್ದ ಐಷಾರಾಮಿ ಕಾರುಗಳು. ಫೋರ್ಡ್ ಜಿಪಿಡಬ್ಲ್ಯೂ, ರೋಲ್ಸ್ ರಾಯ್, ಲ್ಯಾಂಡ್ ರೋವರ್, ಅಂಬಾಸಿಡರ್, ಬೆಡ್ ಫೋರ್ಡ್ ನಂತಹ ಹಲವು ಮರೆಯಾದ ಕಾರುಗಳು ಪ್ರದರ್ಶನದಲ್ಲಿ ಕಾಣಸಿಗುತ್ತಿವೆ.






















































