
ಕನ್ನಡ ನಿರೂಪಕಿ ಅನುಶ್ರೀ ಅವರು ಬೆಂಗಳೂರಿನಲ್ಲಿ ಕೊಡಗು ಮೂಲದ ಉದ್ಯಮಿ ರೋಶನ್ ಜೊತೆಗೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಾಳಿ ಕಟ್ಟುವ ಸಮಯದಲ್ಲಿ ಅನುಶ್ರೀ ಅವರು ಭಾವುಕರಾಗಿದ್ದು ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಜ್ ಬಿ ಶೆಟ್ಟಿ ಸೇರಿದಂತೆ ಅನುಶ್ರೀ ಅವರ ಆತ್ಮೀಯರು, ಕುಟುಂಬಸ್ಥರು, ಚಿತ್ರರಂಗದ ಬಳಗದವರು ಮದುವೆಯಲ್ಲಿ ಪಾಲ್ಗೊಂಡಿದ್ದು ಈ ಜೋಡಿಗೆ ಶುಭ ಹಾರೈಸಿದ್ದಾರೆ.