
ನವದೆಹಲಿ: ಕಳೆದ ಒಂದು ವಾರದಿಂದ ಅಸ್ತವ್ಯಸ್ತಗೊಂಡು ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದ್ದ ಇಂಡಿಗೋ ವಿಮಾನಯಾನ ಸಂಸ್ಥೆಯು ಕೊನೆಗೂ ತನ್ನ ಸೇವೆಯನ್ನು ಸಹಜ ಸ್ಥಿತಿಗೆ ಮರಳಿಸಿದೆ ಎಂದು ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ.
ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ ಸಿಇಒ ‘ನಮ್ಮ ನಿರೀಕ್ಷೆಗಿಂತಲೂ ಮುಂಚೆಯೇ ಪರಿಸ್ಥಿತಿ ಸುಧಾರಿಸಿದೆ. ನಮ್ಮ ನೆಟ್ವರ್ಕ್ ನಲ್ಲಿರುವ 138 ಸ್ಥಳಗಳಿಗೆ ಹಾರಾಟ ಆರಂಭಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
ಆದರೂ ಡಿಜಿಸಿಎ ಸೂಚನೆ ಅನುಸಾರ ಇಂಡಿಗೋ ವಿಮಾನ ಹಾರಾಟದಲ್ಲಿ 10% ಕಡಿತವಾಗಲಿದ್ದು ಅಂದರೆ ನಿತ್ಯ ಹಾರಾಟ ನಡೆಸುತ್ತಿದ್ದ 2200 ವಿಮಾನಗಳ ಪೈಕಿ 216 ವಿಮಾನಗಳು ಕಡಿತವಾಗಲಿದೆ.





