27.7 C
Udupi
Thursday, July 31, 2025
spot_img
spot_img
HomeBlogಆ.1ರಿಂದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಿಯಮಗಳಲ್ಲಿ ಹೊಸ ನಿಯಮ ಜಾರಿ

ಆ.1ರಿಂದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಿಯಮಗಳಲ್ಲಿ ಹೊಸ ನಿಯಮ ಜಾರಿ

ನವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ವು ಜನರ ಅವಿಭಾಜ್ಯ ಅಂಗವಾಗಿರುವ ಯುಪಿಐ ಪೇಮೆಂಟ್ ನಲ್ಲಿ ನಾಳೆಯಿಂದ ಕೆಲ ಪ್ರಮುಖ ಬದಲಾವಣೆ ತರಲು ಮುಂದಾಗಿದೆ.

ಹೊಸ ನಿಯಮಗಳ ಪ್ರಕಾರ, ಬಳಕೆದಾರರು ಪ್ರತಿ ಯುಪಿಐ ಅಪ್ಲಿಕೇಶನ್‌ನಲ್ಲಿ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶ ಇರಲಿದೆ. ಅದಲ್ಲದೇ ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ಪಡೆಯಲು ಅವಕಾಶವಿರಲಿದೆ. ಇನ್ನೂ ಬ್ಯಾಲೆನ್ಸ್ ಚೆಕ್ ಮಾಡುವುದರ ಜೊತೆಗೆ ಓಟಿಟಿ ಸೇರಿದಂತೆ ಮೊಬೈಲ್ ರಿಚಾರ್ಜ್‌ಗಳ ಆಟೋ ಪೇಗೆ ಸಮಯ ನಿಗದಿಯಾಗಿದ್ದು, ಆ ಸಮಯ ಸಂಧರ್ಭದಲ್ಲಿ ಮಾತ್ರ ಪಾವತಿಗೆ ಅವಕಾಶ ಇರಲಿದೆ. ಮೂರು ನಿರ್ದಿಷ್ಟ ಸಮಯದ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಪೀಕ್ ಅವರ್‌ಗಳಲ್ಲಿ ಸರ್ವರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲು ಈ ಪಾವತಿಗಳನ್ನು ಬೆಳಗ್ಗೆ 10 ಗಂಟೆಗೂ ಮುನ್ನ, ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆಯ ನಡುವೆ, ಮತ್ತು ರಾತ್ರಿ 9.30ರ ನಂತರ ಮಾತ್ರ ಆಟೋ ಪೇ ಪ್ರಕ್ರಿಯೆ ನಡೆಯಲಿದೆ. ಇಷ್ಟೇ ಅಲ್ಲ ವಹಿವಾಟು ಬಾಕಿ ಉಳಿದಿರೋದನ್ನ ಪರಿಶೀಲನೆ ಮಿತಿಯನ್ನು ಮೂರು ಬಾರಿಗೆ ಮಾತ್ರ ಪರಿಶೀಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಪ್ರಯತ್ನದ ನಡುವೆ ಕಡ್ಡಾಯವಾಗಿ 90 ಸೆಕೆಂಡ್ ಅಂತರ ಇರಲೇಬೇಕು. ಈ ನಿಯಮವು ಬಳಕೆದಾರರಿಗೆ ಕೊಂಚ ಅನೂನುಕೂಲ ಉಂಟು ಮಾಡುವ ಸಾಧ್ಯತೆಯಿದೆ.

ಈ ಹೊಸ ಮಾರ್ಗಸೂಚಿಗಳು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಡಿಜಿಟಲ್ ಪಾವತಿ ಆಪ್‌ಗಳಿಗೆ ಅನ್ವಯವಾಗಲಿದ್ದು ಈ ಬದಲಾವಣೆಗಳು ಬಳಕೆದಾರರ ದೈನಂದಿನ ವಹಿವಾಟುಗಳ ಮೇಲೆ ಅಂತಹ ಬದಲಾವಣೆಗಳನ್ನೇನೂ ತರುವುದಿಲ್ಲವಾದರೂ, ಬ್ಯಾಲೆನ್ಸ್ ಚೆಕ್ ಮತ್ತು ಆಟೋ ಡೆಬಿಟ್‌ಗಳಂತಹ ಕೆಲವು ಕಾರ್ಯಗಳಿಗೆ ಮಿತಿಗಳನ್ನು ಹೇರಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page