
ಲಿಂಗಾಯತ ಸಮುದಾಯಕ್ಕೆ ಸೇರಿರುವ ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಧನಂಜಯ್ ಆಹಾರ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ. ತಮ್ಮ ಬಳಿ ಯಾರು ‘ಏನು ತಿನ್ನುತ್ತೀರಿ?’ ಎಂದು ಕೇಳಿದರೆ ಸಂತೋಷದಿಂದ ಅದನ್ನು ವಿವರಿಸುತ್ತೇನೆ. ‘ಧನಂಜಯ್ ನಾನ್‌ವೆಜ್ ತಿನ್ನುತ್ತಾರಾ ಎಂದು ಕೇಳುವುದು ತಪ್ಪಲ್ಲ. ಆದರೆ ಲಿಂಗಾಯತರು ಅಥವಾ ಬ್ರಾಹ್ಮಣರು ಎಲ್ಲರೂ ಮಾಂಸ ತಿನ್ನುತ್ತಾರಾ ಎಂದು ಸಾಮಾನ್ಯೀಕರಿಸಿ ಕೇಳುವುದು ಸರಿಯಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



















