27 C
Udupi
Monday, April 6, 2026
spot_img
spot_img
HomeBlogಆಳ್ವಾಸ್ ಸಾಂಸ್ಕೃತಿಕ ವೈಭವದ ಪೂರ್ವಭಾವಿ ಸಭೆ

ಆಳ್ವಾಸ್ ಸಾಂಸ್ಕೃತಿಕ ವೈಭವದ ಪೂರ್ವಭಾವಿ ಸಭೆ

spot_imgspot_img

ಪ್ರತಿಭಾವಂತ ಮಕ್ಕಳಿಗೆ, ತರಬೇತಿ ನೀಡಿ ಸಾಂಸ್ಕೃತಿಕ ಸಂಪತ್ತಾಗಿ ರೂಪಿಸುವ ಆದ್ಯತೆ: ಡಾ. ಮೋಹನ್ ಆಳ್ವ

ಸಾಂಸ್ಕೃತಿಕ ಲೋಕಕ್ಕೆ, ಮೋಹನ್ ಆಳ್ವರ ಕೊಡುಗೆ ಅಪಾರ: ಡಾ. ಸುಧಾಕರ್ ಶೆಟ್ಟಿ

ಒಗ್ಗಟ್ಟಾಗಿ ಕಾರ್ಯಕ್ರಮ ಯಶಸ್ವಿಗೊಳಿಸೋಣ: ವಿಜಯ ಶೆಟ್ಟಿ

ಕಾರ್ಕಳ; ನ.19 ರಂದು ಪ್ರಕಾಶ್ ಹೊಟೆಲ್ ಸಭಾಂಗಣದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದ ಪೂರ್ವಭಾವಿ ಸಭೆ ನಡೆಯಿತು.

ಆಳ್ವಾಸ್ ಸಾಂಸ್ಕೃತಿಕ ವೈಭವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ್ ಆಳ್ವ ಪ್ರತಿಭಾವಂತ ಮಕ್ಕಳಿಗೆ ತರಬೇತಿ ನೀಡಿ ನಾಡಿನ ಸಾಂಸ್ಕೃತಿಕ ಸಂಪತ್ತಾಗಿ ರೂಪಿಸುವುದು‌ ನಮ್ಮ ಆದ್ಯತೆ‌. ಶಾಸ್ತ್ರೀಯ, ಜಾನಪದ ಕಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ‌ 400 ವಿದ್ಯಾರ್ಥಿಗಳಿಗೆ ದತ್ತು ಪಡೆದು ಅವರಿಗೆ ತರಬೇತಿ ನೀಡಲು 50 ಕೋ.ರೂ. ಖರ್ಚು ಬರುತ್ತದೆ. ಯುವ ಸಂಪತ್ತು ಹೊಂದಿರುವ ದೇಶ ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ಈ‌ ನೆಲೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ, ಸಾಂಸ್ಕೃತಿಕ ರಂಗಕ್ಕೆ‌ಚ್ಯುತಿ ಬಾರದಂತೆ ಚೌಕಟ್ಟಿನಲ್ಲಿ ಅದರ ಮಹತ್ವ ಕಾಪಾಡಿಕೊಳ್ಳುವ ಕೆಲಸ ನಡೆಸಲಾಗುತ್ತಿದೆ. ಕಾರ್ಕಳ ಸ್ಬರಾಜ್ ಮೈದಾನದಲ್ಲಿನ ಸಾಂಸ್ಕೃತಿಕ ವೈಭವ ಯಶಸ್ವಿಗೊಳಿಸೋಣ, ಎಲ್ಲರ ಸಹಕಾರವಿರಲಿ ಎಂದು ಹೇಳಿದರು.

ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ ,ಎಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾದರೂ ಅಲ್ಲಿ ಮೋಹನ್ ಆಳ್ವರ ಕೊಡುಗೆ ಇರುತ್ತದೆ. ಸಮಾಜದಲ್ಲಿ ಸಂಸ್ಕಾರ ರೂಪಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ನ.29ರಂದು ಸಂಜೆ 5:30ಕ್ಕೆ, ನಡೆಯುವ ಆಳ್ವಾಸ್ ಸಾಂಸ್ಕೃತಿಕ ವೈಭವ ಹೆಚ್ಚು ಜನರು ಭಾಗಿಯಾಗುವಂತೆ ನೋಡಿಕೊಳ್ಳೋಣ. ಎಲ್ಲರೂ ಒಟ್ಟಾಗಿ ಹಿರಿಯರು, ಮಕ್ಕಳನ್ನು ಸೇರಿಸೋಣ. ಎಲ್ಲ ಶಾಲೆಗಳ‌ ಮಕ್ಕಳು, ಶಿಕ್ಷಕರು ಕಲಾಭಿಮಾನಿಗಳು ಭಾಗವಹಿಸುವಂತೆ ನೋಡಿಕೊಳ್ಳೋಣ ಎಂದು ಹೇಳಿದರು. ಕಾರ್ಕಳ ಘಟಕದ ಅಧ್ಯಕ್ಷರಾದ ವಿಜಯ ಶಟ್ಟಿ ಮಾತನಾಡುತ್ತ, ಕಾರ್ಕಳದಲ್ಲಿ ನಡೆಯಲಿರುವ ಆಳ್ವಾಸ್ ವಿರಾಸತ್ ವೈಭವವನ್ನು ಒಗ್ಗಟ್ಟಾಗಿ ಯಶಸ್ವಿಗೊಳಿಸೋಣ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ಕೈಜೋಡಿಸೋಣ ಎಂದರು.

ಈ ಪೂರ್ವಭಾವಿ ಸಭೆಯಲ್ಲಿ, ನುಡಿಸಿರಿ ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷರಾದ ವಿಜಯ ಶೆಟ್ಟಿ, ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ| ಮಂಜುನಾಥ್ ಕೋಟ್ಯಾನ್, ಎಸ್ ವಿ.ಟಿ ವಿದ್ಯಾಸಂಸ್ಥೆ ಸಂಚಾಲಕ ಕೆ. ಪಿ. ಶೆಣೈ, ಪ್ರಮುಖರಾದ ವಿಜಯ ಶೆಟ್ಟಿ ,ಅಶೋಕ್ ಅಡ್ಯಂತಾಯ, ಗುಣಪಾಲ್ ಕಡಂಬ,
ಮಿತ್ರಪ್ರಭಾ ಹೆಗ್ಡೆ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ಪ್ರಮುಖರು‌ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಸಾಪ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಸ್ವಾಗತ ಕೋರಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page