
ಡಿಸಿಎಂ ಡಿ.ಕೆ ಶಿವಕುಮಾರ್ ಸದನದಲ್ಲಿ, ಆರ್‌ಎಸ್‌ಎಸ್‌ಗೆ ಪ್ರಾರ್ಥನಾ ಗೀತೆ “ನಮಸ್ತೆ ಸದಾ ವತ್ಸಲೇ” ವಿಚಾರ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಸಚಿವ ಸತೀಶ್ ಜಾರಕಿಹೊಳಿ, ಆರ್ ಎಸ್ ಎಸ್ ಗೀತೆ ಹಾಡಿದ ಕೂಡಲೇ ಡಿ.ಕೆ ಶಿವಕುಮಾರ್ ರವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವುದಾದರೆ ನಾನು ಮತ್ತು ನಮ್ಮ ಶಾಸಕರು ಸಹ ಹಾಡುತ್ತಾರೆ ನಮ್ಮನ್ನು ಕೂಡ ಸಿಎಂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಆರ್ ಎಸ್ ಎಸ್ ಗೀತೆ ಹಾಡಿದ ಕೂಡಲೇ ಡಿ.ಕೆ ಶಿವಕುಮಾರ್ ಬಿಜೆಪಿ ಪರ ಅಂತ ಹೇಗೆ ಹೇಳುತ್ತೀರಿ ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಕೆ.ಎನ್ ರಾಜಣ್ಣ ವಜಾ ಆಗಿರುವ ವಿಷಯ ಹಾಗೂ ಡಿಸಿಎಂ ಆರ್.ಎಸ್ ಎಸ್ ಗೀತೆ ಹಾಡಿದ ವಿಚಾರ ಬೇರೆ. ನನಗೂ ಆರ್ ಎಸ್ ಎಸ್ ಗೀತೆ ತಿಳಿದಿದೆ ಎಂದು ಹೇಳಿದ್ದಾರೆ.