29.9 C
Udupi
Tuesday, January 27, 2026
spot_img
spot_img
HomeBlogಆರ್ಷಕಾವ್ಯ - ಉಪಕ್ರಮಪರ್ವ ಕುರಿತು ಡಾ. ವಿನಾಯಕ ಭಟ್ ಗಾಳಿಮನೆ ಇವರಿಂದ ಉಪನ್ಯಾಸ

ಆರ್ಷಕಾವ್ಯ – ಉಪಕ್ರಮಪರ್ವ ಕುರಿತು ಡಾ. ವಿನಾಯಕ ಭಟ್ ಗಾಳಿಮನೆ ಇವರಿಂದ ಉಪನ್ಯಾಸ

ಕಾಂತಾವರ ಕನ್ನಡ ಸಂಘ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ, ಅಲ್ಲಮಪ್ರಭು ಪೀಠ ಕಾಂತಾವರ ಜಂಟಿಯಾಗಿ ಆಯೋಜಿಸಿದ  ಮಹಾಭಾರತದ ಉಪನ್ಯಾಸ ಮಾಲೆಯ ಮೊದಲ ಸೋಪಾನವಾಗಿ,
“ಆರ್ಷಕಾವ್ಯ – ಉಪಕ್ರಮಪರ್ವ” ಕುರಿತು  ಡಾ. ವಿನಾಯಕ ಭಟ್ ಗಾಳಿಮನೆ ಇವರ ಉಪನ್ಯಾಸ ಕಾರ್ಕಳದಲ್ಲಿ ನಡೆಯಿತು.


ಮಹಾಭಾರತ ಕಾವ್ಯರಚನೆಯು ಜಯ ಇತಿ ಇತಿಹಾಸಃ ಎಂದು ತೊಡಗಿ ಅದು ಮುಂದೆ ಭಾರತ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಮುಂದೆ ಉಪಾಖ್ಯಾನಗಳೊಂದಿಗೆ ಇಂದು “ಮಹಾಭಾರತ” ಎಂದು  ಪ್ರಸಿದ್ಧವಾಗಿದೆ .


8800ಶ್ಲೋಕ,‌24000ಶ್ಲೋಕಗಳು ಮುಂದೆ ಶತಸಾಹಸ್ರೀ ಸಂಹಿತಾ ಅಂದರೆ 10000ಶ್ಲೋಕಗಳಾಗಿ ಲೋಕದಲ್ಲಿ ಸ್ಥಿರವಾಯಿತು ಎಂದರು.ಮನು, ಆಸ್ತೀಕ,‌ಉಪರಿಚರ‌ ಎಂಬ ಮೂರು ಆರಂಭ ಬಿಂದುಗಳನ್ನು  ಇಲ್ಲಿ ಗುರುತಿಸಲಾಗಿದೆ .ಮಹಾಭಾರತ ವು ಮೂರು ಸ್ತರಗಳಲ್ಲಿ ಕಥನವಾದ ಏಕಮೇವಾದ್ವಿತೀಯ ಗ್ರಂಥ..
ಜನಮೇಜಯ – ವೈಶಂಪಾಯನ ಉಗ್ರಶ್ರವಸೌತಿ- ಶೌನಕರ ಸಂವಾದಗಳೊಂದಿಗೆ ಸಿದ್ಧವಾದ ಗ್ರಂಥ ಎಂದು ಕಾವ್ಯ ಸ್ವರೂಪ ವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.


ಓಂ‌ನಮೋ ಭಗವತೇ ವಾಸುದೇವಾಯ ಎಂಬ ಆರಂಭದೊಂದಿಗೆ
ನಾರಾಯಣಂ ನಮಸ್ಕೃತ್ಯ ಎಂಬ ನಾಂದೀ ಶ್ಲೋಕದ ಅರ್ಥವನ್ನೂ ವಿಸ್ತರಿಸಿದರು.
ಧೃತರಾಷ್ಟ್ರ – ಸಂಜಯರ ನಡುವಿನ ವಿಶಿಷ್ಟ ಸಂವಾದವನ್ನೂ ಸಾಂದರ್ಭಿಕ ವಾಗಿ ಕಥಾಲೋಕನದಲ್ಲಿ ಸೇರಿದ್ದನ್ನು ಮಾರ್ಮಿಕವಾಗಿ ವಿವರಿಸಿ ಮೊದಲ ಉಪನ್ಯಾಸ ಕ್ಕೆ ಮಂಗಲಹಾಡಿದರು. ಅಧ್ಯಕ್ಷತೆಯನ್ನು ಕನ್ನಡ ಸಂಗ ಕಾಂತಾವರದ ಅಧ್ಯಕ್ಷರಾದ  ಡಾ.ನಾ ಮೊಗಸಾಲೆ ವಹಿಸಿದ್ದು, ಶಾರ್ವರಿ ಶ್ಯಾನುಭೋಗರ ಪ್ರಾರ್ಥನೆ, ಅಭಾಸಾಪದ ಗೌರವ ಅಧ್ಯಕ್ಷರಾದ ನಿತ್ಯಾನಂದ ಪೈ ಸ್ವಾಗತಿಸಿ,    ಸುಲೋಚನ ಬಿ.ವಿ  ಪರಿಚಯಿಸಿ ,ಡಾ.ಮಾಲತಿ ಪೈ ಕಾರ್ಯಕ್ರಮ ನಿರೂಪಿಸಿದರು.  ಅಭಾಸಾಪದ ಅಧ್ಯಕ್ಷೆ ಪ್ರೊ.ಮಿತ್ರಪ್ರಭಾ ಹೆಗ್ಡೆ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page