
ಬೆಂಗಳೂರು: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿಯವರು ದೇವೇಗೌಡರ ನಿವಾಸದ ಬಳಿ ಸುದ್ದಿಗಾರರರೊಂದಿಗೆ ಮಾತನಾಡಿ ಆರೋಪ ಬಂದ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಎಸ್‍ಐಟಿ ತನಿಖೆ ಎದುರಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಘಟನೆ ಆದ ದಿನವೇ ಕುಮಾರಣ್ಣ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದಿದ್ದರು. ಸಂಸದರು ಎಸ್‍ಐಟಿ ತನಿಖೆ ಎದರಿಸುವುದು ಸೂಕ್ತ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು. ಹಾಸನದ ಸಂಸದರ ವೀಡಿಯೋ ರಿಲೀಸ್ ಆದ ಬಳಿಕ ಸಂತ್ರಸ್ತೆಯರ ಮುಖವನ್ನ ಬ್ಲರ್ ಮಾಡಲಿಲ್ಲ. ವೀಡಿಯೋ ಬಿಡುಗಡೆ ಮಾಡಿ ಸಂತ್ರಸ್ತೆಯರ ಮಾನ ಹರಾಜು ಮಾಡೋದು ಯಾಕೆ? ವೀಡಿಯೋ ರಿಲೀಸ್ ಮಾಡಿದವರ ಬಗ್ಗೆ ಕ್ರಮ ಯಾಕೆ ಆಗ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.