
ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡಬಿದಿರೆ ಇದರ ರಜತ ಮಹೋತ್ಸವ ಹಾಗೂ ವಿಶ್ವ ವಿಕಲ ಚೇತನ ದಿನಾಚರಣೆಯ ಕಾರ್ಯಕ್ರಮದಲ್ಲಿ ಅರುಣೋದಯ ವಿಶೇಷ ಶಾಲೆಯ ಮಕ್ಕಳು ಭಾಗವಹಿಸಿ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.

ವಿಕಲಚೇತನರ ಹಕ್ಕುಗಳು ಮತ್ತು ಪುನರ್ವಸತಿಗೆ ಸಂಬಂಧಿಸಿದ ಜಾಥ ಮತ್ತು ಪ್ಲಕ್ ಕಾರ್ಡ್ ಸ್ಪರ್ಧೆಯಲ್ಲಿ 3 ವಿದ್ಯಾರ್ಥಿಗಳು ಭಾಗವಹಿಸಿ ಸಂಧ್ಯಾ ಪ್ರಥಮ ಸ್ಥಾನ ಹಾಗೂ ಪ್ರೀತಂ ಸಿಕ್ವೆರಾ ತೃತೀಯ ಹಾಗೂ ಶ್ರೇಯಸ್ ಸಮನಾಧಕರ ಬಹುಮಾನ ಗಳಿಸಿದ್ದಾರೆ.ಇವರಿಗೆ ಶಾಲಾ ಆಡಳಿತ ಮಂಡಳಿಯವರು ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಅಭಿನಂಡನೆಯನ್ನು ಸಲ್ಲಿಸಿರುತ್ತಾರೆ.





