
ಕಾರ್ಕಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಅಮೃತ್ 2.O ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿದ್ದು ಹೊಸದಾಗಿ ನಿರ್ಮಾಣವಾಗಿರುವ GLSR ಹಾಗೂ ಫಿಲ್ಟರ್ ಮೀಡಿಯಾವನ್ನು ರಾಮಸಮುದ್ರ ಜಲ ಶುದ್ಧೀಕರಣ ಘಟಕದಲ್ಲಿರುವ ಓವರ್ ಹೆಡ್ ಟ್ಯಾಂಕಿಗೆ ಸಂಪರ್ಕಿಸಲು ಹಾಗೂ ಪರಿವರ್ತಕಕ್ಕೆ ವಿದ್ಯುತ್ ಸಂಪರ್ಕ ನೀಡುವ ಕಾಮಗಾರಿ ಹಿನ್ನೆಲೆಯಲ್ಲಿ ಆಗಸ್ಟ್ 02 ಮತ್ತು 03 ರಂದು ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಪುರಸಭೆ ಪ್ರಕಟಣೆ ಹೊರಡಿಸಿದೆ.
ಇದಲ್ಲದೆ ಮುಂದಿನ 3ರಿಂದ 4 ದಿನಗಳವರೆಗೆ ಕಾರ್ಕಳ ಪುರಸಭಾ ವ್ಯಾಪ್ತಿಯ ಕೆಲವೊಂದು ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದ್ದು ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದೆ.