
ಭಗತ್ ಸಿಂಗ್ ಸೇವಾ ಬಳಗ ಇವರ ಆಶ್ರಯದಲ್ಲಿ 50ನೇ ಯೋಜನೆಯ ಅಂಗವಾಗಿ ದಿನಾಂಕ 11.10.2025 ರಂದು ಗರಡಿ ಮೈದಾನ ಹಾಳೆಕಟ್ಟೆಯಲ್ಲಿ ಅಶಕ್ತ ಮಗುವಿನ ಚಿಕಿತ್ಸೆ ಮತ್ತು ವಿದ್ಯಾಭ್ಯಾಸಕ್ಕಾಗಿ ಸಂಜೆ 6:00 ಯಿಂದ 3ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದೆ.
ಕರ್ಪೆ ಗ್ರಾಮದ ಸಿಕಾಯಿಗುಡ್ಡೆ ನಿವಾಸಿ ಸಂತೋಷ್ ಪೂಜಾರಿ ಮತ್ತು ಭುವನೇಶ್ವರಿ ದಂಪತಿಗಳ ಮೂರು ವರ್ಷದ ಮಗು ಸಾರ್ಥಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸುಮಾರು 25 ಲಕ್ಷದ ಅವಶ್ಯಕತೆಯಿರುವುದರಿಂದ ಮಗುವಿನ ಪೋಷಕರು ಮುಂದಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಹೀಗಾಗಿ ತಾವೆಲ್ಲರೂ ಆರ್ಥಿಕ ಸಹಾಯವನ್ನು ಮಾಡಿ ಮಗುವಿನ ಜೀವ ರಕ್ಷಣೆಯ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಬೇಕೆಂದು ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9945835615 / 9113604611 ಸಂಪರ್ಕಿಸಬಹುದಾಗಿದೆ.









