
ಅಯೋಧ್ಯೆ: ದೇವಸ್ಥಾನದ ಭದ್ರತೆ ಹಾಗೂ ಭಕ್ತರ ಸೌಲಭ್ಯದ ದೃಷ್ಟಿಯಿಂದ ರಾಮಮಂದಿರಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಲಾಗಿದೆ ಎಂದು ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಮೊಬೈಲ್ ಫೋನ್‌ಗಳನ್ನು ಸುರಕ್ಷಿತವಾಗಿ ಇಡುವಂತಹ ವ್ಯವಸ್ಥೆ ಶೀಘ್ರದಲ್ಲೇ ತರುತ್ತೇವೆ. ಭಕ್ತರ ಬೆಲೆಬಾಳುವ ವಸ್ತು ಇಡಲು ಈಗಾಗಲೇ ನಾವು ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದೇವೆ. ಇದರ ನಿರ್ವಹಣೆಗಾಗಿ ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.