ಕವಿತೆ
ರಾಘವೇಂದ್ರ ಎಚ್ ಹಳ್ಳಿ ಕೊಪ್ಪಳ

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು
ಎನಗೆ ಬಹು ಖುಷಿ ಹೆತ್ತವರು ನಗುತಿರಲು
ಎಲ್ಲಿಲ್ಲದ ಸಂತೋಷ ಗೆಳೆಯ ಬರುತಿರಲು
ಕಾಯುವೆ ಅಮ್ಮ ನಂಗೆ ಏನಾದರೂ ತರಲು
ಬೆಲೆ ಕಟ್ಟಲಾಗದು ತಾಯಿಯ ತ್ಯಾಗದಲ್ಲಿ
ಋಣ ತೀರಿಸಲಾಗದು ಮಾತೆಯ ಪ್ರೀತಿಯಲ್ಲಿ
ಮುಕ್ತಿ ಹೊಂದಬೇಕು ಹಡೆದವರ ಸೇವೆಯಲ್ಲಿ
ಮುಕ್ಕೋಟಿ ದೇವರು ತಾಯಿ ಪಾದದಡಿಯಲ್ಲಿ
ನವ ಮಾಸ ಹೊಟ್ಟೆಯಲ್ಲಿ ಇಟ್ಕೊಂಡಿರ್ತಾಳೆ
ನಾವು ದೊಡ್ಡವರಾಗೋತನಕ ಸಾಕಿರ್ತಾಳೆ
ನಮ್ಮ ಹೊಟ್ಟೆಗಾಗಿ ಬೆವರನಿ ಸುರಿಸಿರ್ತಾಳೆ
ಕುಟುಂಬಕ್ಕಾಗಿ ಜೀವ ಮೂಡುಪಾಗಿಟ್ಟಿರ್ತಾಳೆ
ನಮ್ಮ ಉಸಿರಿರೋತನಕ ಸೇವೆ ಮಾಡೋಣ
ಹೆತ್ತವರಿರೋತನಕ ಜೋಪಾನ ಮಾಡೋಣ
ಎಲ್ಲರನ್ನು ನಗಿಸುತ್ತಾ ನಲಿಯುತ್ತಾ ಸಾಗೋಣ
ಹಡೆದವರನ್ನ ಆರಾಧಿಸಿ ಮುಕ್ತಿ ಹೊಂದೋಣ.





