
ಅಮೆರಿಕಾದ ಸುಂಕ ನೀತಿಯಿಂದಾಗಿ ಭಾರತವು ಈಗಾಗಲೇ ಸಂಕಷ್ಟಕ್ಕೀಡಾಗಿದ್ದು ಇದೀಗ ಮೆಕ್ಸಿಕೋ ಕೂಡ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಲು ನಿರ್ಧರಿಸಿದ್ದು, 2026ರ ಜನವರಿ ಮೊದಲ ದಿನದಂದೇ ಈ ಹೊಸ ಸುಂಕ ನೀತಿ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.
ಮೆಕ್ಸಿಕೋ ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಅಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಲು ಅನುಮೋದನೆ ನೀಡಿದ್ದು ಅಲ್ಲಿನ ರಾಷ್ಟ್ರೀಯ ಉದ್ಯಮ ಮತ್ತು ಉತ್ಪಾದಕರನ್ನು ರಕ್ಷಿಸಲು ವಿದೇಶಿ ವಸ್ತುಗಳ ಮೇಲೆ ಸುಂಕ ವಿಧಿಸಲಾಗಿದೆ.
ಮೆಕ್ಸಿಕೋ ದೇಶವು ಏಷ್ಯಾ ರಾಷ್ಟ್ರಗಳಿಂದ ಆಮದಾಗುವ ವಾಹನಗಳ ಬಿಡಿಭಾಗಗಳು, ಲಘು ಕಾರುಗಳು, ಬಟ್ಟೆ, ಪ್ಲಾಸ್ಟಿಕ್‌ಗಳು, ಸ್ಟೀಲ್, ಗೃಹೋಪಯೋಗಿ ವಸ್ತುಗಳು, ಆಟಿಕೆಗಳು, ಜವಳಿ, ಪೀಠೋಪಕರಣಗಳು, ಪಾದರಕ್ಷೆಗಳು, ಚರ್ಮದ ವಸ್ತುಗಳು, ಕಾಗದ, ಕಾರ್ಡ್‌ಬೋರ್ಡ್, ಮೋಟಾರ್‌ಸೈಕಲ್‌ಗಳು, ಅಲ್ಯೂಮಿನಿಯಂ, ಟ್ರೇಲರ್‌ಗಳು, ಗಾಜು, ಸೋಪುಗಳು, ಸುಗಂಧ ದ್ರವ್ಯಗಳು ಮತ್ತು ಸೌಂದರ್ಯವರ್ಧಕಗಳಂತಹ ಸರಕುಗಳ ಮೇಲೆ ಸುಂಕ ವಿಧಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.





