23.8 C
Udupi
Monday, April 6, 2026
spot_img
spot_img
HomeBlog'ಅನಿಯಮಿತ ಋತುಚಕ್ರ, ವಿಪರೀತ ನೋವು ಸಾಮಾನ್ಯವೆಂದು ನಿರ್ಲಕ್ಷಿಸಬಾರದು' : ಜಾಗೃತಿ ಮೂಡಿಸಿದ ಸಂಗೀತಾ ಭಟ್

‘ಅನಿಯಮಿತ ಋತುಚಕ್ರ, ವಿಪರೀತ ನೋವು ಸಾಮಾನ್ಯವೆಂದು ನಿರ್ಲಕ್ಷಿಸಬಾರದು’ : ಜಾಗೃತಿ ಮೂಡಿಸಿದ ಸಂಗೀತಾ ಭಟ್

spot_imgspot_img

ಕಳೆದ ಕೆಲವು ತಿಂಗಳಿಂದ ಪದೇ ಪದೇ ಋತುಚಕ್ರದ ಸಮಸ್ಯೆ ಎದುರಿಸಿದ್ದ ಸಂಗೀತಾ ಭಟ್ ಮುಟ್ಟಿನ ಸಮಯದಲ್ಲಿ ಸಮಸ್ಯೆ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ ಎಂದು ಕಿವಿಮಾತು ನೀಡಿದ್ದಾರೆ.

ಪದೇ ಪದೇ ಋತುಚಕ್ರ ಸಂಭವಿಸೋದು, ಹಲವು ತಿಂಗಳು ಮುಟ್ಟಾಗದೇ ಇರುವುದು ಅಥವಾ ಮುಟ್ಟಾದಾಗ ಸಹಿಸಲಾರದಷ್ಟು ನೋವು ಉಂಟಾಗುವುದು ಸರ್ವೇ ಸಾಮಾನ್ಯ ಎಂದುಕೊಂಡಿರುತ್ತಾರೆ. ಆದರೆ, ವೈದ್ಯ ಲೋಕ ಇದನ್ನು ಸಾಮಾನ್ಯ ಎಂದು ಪರಿಗಣಿಸೋದಿಲ್ಲ. ಇದರ ಹಿಂದೆ ‘ಆ ಒಂದು’ ಕಾರಣ ಇರಬಹುದು ಎಂದು ನಟಿ ಸಂಗೀತಾ ಭಟ್ ಅವರ ಸ್ವ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಂಗೀತಾ ಭಟ್ಗೆ ಕಳೆದ ಕೆಲವು ತಿಂಗಳಿಂದ ಪದೇ ಪದೇ ಋತುಚಕ್ರ ಸಂಭವಿಸುತ್ತಿತ್ತು. ಇದರ ಜೊತೆಗೆ ಅತೀವ ನೋವು. ಮೊದಲು ವೈದ್ಯರೊಬ್ಬರನ್ನು ಸಂಪರ್ಕಿಸಿದಾಗ ಇದು ಸಾಮಾನ್ಯ ಎಂದಿದ್ದರು. ಕುಟುಂಬದವರಿಗೂ ಹಾಗೆಯೇ ಅನಿಸಿತು. ಹೀಗಾಗಿ, ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ, ಸಂಗೀತಾಗೆ ಮಾತ್ರ ಇದು ಸಾಮಾನ್ಯದ ರೀತಿ ಕಾಣಿಸಲೇ ಇಲ್ಲ. ಹೀಗಾಗಿ, ಸ್ಕ್ಯಾನಿಂಗ್ ಇತ್ಯಾದಿ ಪರೀಕ್ಷೆಗಳನ್ನು ಮಾಡಿಸಿದಾಗ ಗರ್ಭಕೋಶದಲ್ಲಿ 1.75 ಸೆಂಟಿಮೀಟರ್ ಗಡ್ಡೆ ಬೆಳೆದಿರುವುದು ಕಂಡು ಬಂತು. ಈ ಗಡ್ಡೆಯೇ ಈ ಸಮಸ್ಯೆಗೆಲ್ಲ ಕಾರಣ ಎಂದು ವೈದ್ಯರು ಹೇಳಿದರು. ಹೀಗಾಗಿ ಸಂಗೀತಾ ಭಟ್ ಅವರು ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಹೆಸರಿನ ಶಸ್ತ್ರಚಿಕಿತ್ಸೆಗೆ ಒಳಗಾದರು.

‘ಈ ಆಪರೇಷನ್ ಮಾಡಿದ ಬಳಿಕ ಇಷ್ಟೇ ದಿನಕ್ಕೆ ರಿಕವರಿ ಆಗುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಈ ಗಡ್ಡೆ ಒಮ್ಮೆ ಆಪರೇಷನ್ ಮಾಡಿಸಿದ ಬಳಿಕ ಮತ್ತೆ ಬರಬಹುದು. ಜೀವನ ಪೂರ್ತಿ ಈ ಸಮಸ್ಯೆ ಜೊತೆ ಬದುಕಬೇಕಾಗಿ ಬರಬಹುದು’ ಎಂದು ಸಂಗೀತಾ ಭಟ್ ಹೇಳುತ್ತಾರೆ. ಋತುಚಕ್ರದಲ್ಲಿ ವ್ಯತ್ಯಯ ಉಂಟಾಗಬಹುದು. ಮುಟ್ಟಿನ ಸಮಯದಲ್ಲಿ ಅತೀವ ನೋವು ಕಾಣಿಸಿಕೊಳ್ಳುತ್ತದೆಯಂತೆ. ದೇಹದ ತೂಕ ಹೆಚ್ಚೋದು, ತಲೆಕೂದಲು ಉದುರೋ ಸಮಸ್ಯೆ ಕಾಣಿಸುತ್ತದೆ ಎಂದು ಹೇಳಿದ್ದಾರೆ.

ಕೆಲವು ಮಹಿಳೆಯರಿಗೆ ಹಲವು ತಿಂಗಳು ಮುಟ್ಟು ಆಗುವುದೇ ಇಲ್ಲ. ಇನ್ನೂ ಕೆಲವರಿಗೆ ತಿಂಗಳಿಗೆ ಹಲವು ಬಾರಿ ಆಗಬಹುದು. ಋತುಚಕ್ರ ಉಂಟಾದಾಗ ಸಾಕಷ್ಟು ನೋವು ಕಾಣಿಸಿಕೊಳ್ಳಬಹುದು. ಇದನ್ನು ಅನೇಕರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಅದು ಸರಿ ಅಲ್ಲ. ನಾವು ತಿನ್ನುವ ಆಹಾರದಲ್ಲಿ ಸಾಕಷ್ಟು ವಿಷಕಾರಿ ಅಂಶಗಳಿರುತ್ತವೆ. ಇದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಆಗಬಹುದು’ ಎಂದು ಹೇಳಿದ್ದಾರೆ.

ಈ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಎಂದರೆ ಇಲ್ಲಿ ಹೊಟ್ಟೆ ಕೊಯ್ದು ಆಪರೇಷನ್ ಮಾಡೋದಿಲ್ಲ. ಬದಲಿಗೆ ಒಂದು ಸಣ್ಣ ಮಿಶನ್ ಅನ್ನು ದೇಹದ ಒಳಗೆ ಕಳುಹಿಸಿ ಈ ಆಪರೇಷನ್ ಮಾಡಲಾಗುತ್ತದೆ. ಎಷ್ಟೋ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿರಬಹುದು. ಹೀಗಾಗಿ ಅದನ್ನು ನಿರ್ಲಕ್ಷಿಸಬಾರದು. ಮುಂದೊಮ್ಮೆ ಇದು ಕ್ಯಾನ್ಸರ್ ಆಗಿಯೂ ಬದಲಾಗುವ ಸಾಧ್ಯತೆ ಇರುತ್ತದೆ. ಗರ್ಭಕೋಶ ಲೈನ್ಅಲ್ಲೇ ಬೆಳೆಯುವುದರಿಂದ ಮುಂದೆ ಪ್ರೆಗ್ನೆನ್ಸಿಗೂ ಸಮಸ್ಯೆ ಉಂಟು ಮಾಡಬಹುದು’ ಎಂದು ಸಂಗೀತಾ ಭಟ್ ಜಾಗೃತಿ ಮೂಡಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page