
ಬೆಂಗಳೂರು: ಸೊಸೆಯೊಬ್ಬಳು ಅತ್ತೆಯ ಕೊಲೆಗೆ ಸಂಚುರೂಪಿಸಿ ವೈದ್ಯರಲ್ಲಿ ಮೆಸೇಜ್ ಮೂಲಕ ಸಲಹೆ ಕೇಳಿರುವ ವಿಚಿತ್ರ ಪ್ರಕರಣವೊಂದು ಬೆಂಗಳೂರಿನಲ್ಲಿ ವರದಿಯಾಗಿದೆ.
ಅತ್ತೆ ಕಾಟ ತುಂಬಾ ಜಾಸ್ತಿಯಾಗಿದೆ, ಹೇಗಾದರೂ ಮಾಡಿ ಸಾಯಿಸಬೇಕಿತ್ತು. ಮಾತ್ರೆ ಹೇಳಿ ಅಂತ ಬೆಂಗಳೂರಿನ ವೈದ್ಯ ಸುನಿಲ್ ಕುಮಾರ್ ಅವರಿಗೆ ಮಹಿಳೆಯೊಬ್ಬಳು ಮೆಸೇಜ್ ಮಾಡಿದ್ದು ಇದೀಗ ಬಾರಿ ವೈರಲ್ ಆಗಿದೆ.
ವೈದ್ಯರು ಇದನ್ನು ಅಲ್ಲಿಗೆ ಬಿಡದೆ ಇಂತಹ ಪ್ರಕರಣಗಳು ಆಗುತ್ತಲೇ ಇರುತ್ತದೆ. ಇದನ್ನು ಕಡೆಗಣಿಸಬಾರದು ಎಂದು ಮೆಸೇಜ್ನ ಸ್ಕ್ರೀನ್ ಶಾಟ್ ನೊಂದಿಗೆ ಸಂಜಯ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಫೆಬ್ರವರಿ 17ರಂದು ಇನ್ಸ್ಟಾಗ್ರಾಂ ಮೂಲಕ ನಂಬರ್ ಪಡೆದ ಮಹಿಳೆ, ವೈದ್ಯರಿಗೆ ನನ್ನ ಅತ್ತೆ ನನಗೆ ತುಂಬಾ ಕಾಟ ಕೊಡುತ್ತಿದ್ದಾರೆ. ಅದಕ್ಕೆ ಅವರನ್ನು ಸಾಯಿಸುವುದು ಹೇಗೆ ಎಂದು ಹೇಳಿ. ಟ್ಯಾಬ್ಲೆಟ್ ಇರುತ್ತಲ್ವಾ, 1-2 ತಗೊಂಡ್ರೆ ಸಾಯ್ತಾರೆ ಅಲ್ವಾ ಎಂದು ಮೆಸೇಜ್ ಮಾಡಿ ಸಾಯಿಸುವ ಮಾತ್ರೆ ಕೇಳಿದ್ದಾರೆ. ವೈದ್ಯರು ನಿರಾಕರಿಸಿದ ತಕ್ಷಣ ಮಹಿಳೇ ಮೆಸೇಜ್ ಡಿಲೀಟ್ ಮಾಡಿ, ವೈದ್ಯರ ನಂಬರನ್ನು ಬ್ಲಾಕ್ ಮಾಡಿದ್ದಾಳೆ. ನಂತರ ಕರೆಮಾಡಿ ಕ್ಷಮೆ ಕೂಡಾ ಕೇಳಿದ್ದಾಳೆ.
ಇನ್ನು ಈ ಪ್ರಕರಣದ ಬಗ್ಗೆ ಅನುಮಾನ ಇರುವ ವೈದ್ಯರು, ಈ ಘಟನೆ ಬಗ್ಗೆ ಗೊಂದಲ ಇದ್ದು, ನಾನು ಸಾಮಾಜಿಕವಾಗಿ ಸಕ್ರಿಯನಾಗಿದ್ದು, ವಿಜಯಪುರದಲ್ಲಿ ಶಾಸಕ ಚುನಾವಣೆಗೂ ಸ್ಪರ್ಧಿಸಿದ್ದರಿಂದ ಯಾರಾದರೂ ಟ್ರ್ಯಾಪ್ ಮಾಡಲು ಈ ರೀತಿ ಮೆಸೇಜ್ ಮಾಡಿರಬಹುದು, ಹಿಂದೆಯೂ ಒಂದು ಇದೇ ರೀತಿಯ ಕರೆ ಬಂದಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.