
ಬೆಂಗಳೂರು: ಮೆಟ್ರೋ ದರ ಏರಿಕೆಯ ಬೆನ್ನಲ್ಲಿ ಇದೀಗ ಅಡುಗೆ ಎಣ್ಣೆಯ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.
ಕಳೆದ ಒಂದು ತಿಂಗಳಿಂದ ಕಾರ್ದ್ಯ ತೈಲ ದರ ಏರಿಕೆಯಾಗುತ್ತಿದ್ದು, ತೆಂಗಿನ ಎಣ್ಣೆ ದರ ಲೀಟರ್ ಗೆ ರೂ.300 ಗಡಿ ದಾಟಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಪೂರೈಕೆಯ ಕೊರತೆಯಿಂದಾಗಿ ಸೂರ್ಯಕಾಂತಿ ಎಣ್ಣೆಯ ದರ ಏರಿಕೆ ಕಂಡಿದ್ದು, ಪಾಮ್ ಆಯಿಲ್, ಕಡಲೆಕಾಯಿ ಎಣ್ಣೆ, ಅರಳೆ ಎಣ್ಣೆ, ಸಾಸಿವೆ ಎಣ್ಣೆ 10 ರಿಂದ 20 ರೂ. ದರ ಏರಿಕೆ ಕಂಡಿದೆ.
ತೆಂಗಿನ ಎಣ್ಣೆಯ ದರ ಏರಿಕೆಯಾಗುವುದರ ಜೊತೆಗೆ ಕೊಬ್ಬರಿಯ ದರವು ಏರಿಕೆಯಾಗಿದ್ದು, ಕ್ವಿಂಟಾಲ್ ಗೆ 8 ರಿಂದ 8,500 ರೂ. ಇದ್ದ ಕೊಬ್ಬರಿ ಪ್ರಸ್ತುತ 14,500 ರಿಂದ 15 ಸಾವಿರ ರೂ. ಏರಿಕೆ ಕಂಡಿದೆ.