🔴 ಡಿ. 4 ದತ್ತಪೀಠದಲ್ಲಿ, ಪಾದುಕಾ ದರ್ಶನ

ದತ್ತ ಜಯಂತಿ 2025 ರ ಅಂಗವಾಗಿ ಬಜರಂಗದಳದಿಂದ ಕಾರ್ಕಳ ತಾಲೂಕಿನಲ್ಲಿ ಬುಧವಾರ ಸ್ಕಂದ ಪಂಚಮಿಯ ದಿನ ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕೆ, ತಾಲೂಕು ಸಂಯೋಜಕ ಮನೀಶ್ ನಿಟ್ಟೆ ಹಾಗೂ ಕಾರ್ಯಕರ್ತರು ನೆಲ್ಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ದತ್ತ ಮಾಲಾಧಾರಣೆಗೆ ಚಾಲನೆ ನೀಡಿದರು.
ಕಾರ್ಕಳದಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ದತ್ತ ಭಕ್ತರು ಮಾಲಾಧಾರಿಗಳಾಗಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ದತ್ತ ಪೀಠಕ್ಕೆ ಯಾತ್ರೆ ಹೊರಡಲಿದ್ದು, ಡಿಸೆಂಬರ್ 2 ರಂದು ಅನಸೂಯಾ ದೇವಿ ಪೂಜೆ, ಡಿಸೆಂಬರ್ 3 ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ, ಡಿಸೆಂಬರ್ 4 ರಂದು ಪೀಠದಲ್ಲಿ ದತ್ತ ಪಾದುಕಾ ದರ್ಶನ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಪ್ರಮುಖರಾದ ಸುನಿಲ್ ಕೆ ಆರ್ ತಿಳಿಸಿದರು.



















