
ನವದೆಹಲಿ: ಹೊಸ ವರ್ಷದ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಸಿಹಿ ಸುದ್ದಿ ದೊರಕಿದ್ದು ಅದೇನೆಂದರೆ ಎಲ್ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಅನ್ವಯವಾಗಲಿವೆ.
ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಜನವರಿ 1ರಿಂದ 14.50 ರೂ ಇಳಿಕೆ ಮಾಡಿದ್ದು ದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ನ ಹೊಸ ಬೆಲೆ 1818.50 ರೂ.ನಿಂದ 1804 ರೂ.ಗೆ ಇಳಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮೇಲೆ 16 ರೂ.ವರೆಗೆ ಇಳಿಕೆಯಾಗಿದ್ದು ಈ ತಿಂಗಳು 19 ಕೆಜಿ ಎಲ್ಪಿಜಿ ಸಿಲಿಂಡರ್ 1,895 ರೂಪಾಯಿಗೆ ಸಿಗಲಿದೆ.
ಗೃಹ ಬಳಕೆ ಸಿಲಿಂಡರ್ ಬೆಲೆ 805.50 ರೂಪಾಯಿಯಾಗಿದ್ದು ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.



