
ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ ಹೆಬ್ರಿ ತಾಲೂಕು, ಪರಮಪೂಜ್ಯ ಪದ್ಮವಿಭೂಷಣ ಡಾ ಡಿ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ ಹೇಮಾವತಿ ವಿ ಹೆಗ್ಡೆಯವರ ಮಾರ್ಗದರ್ಶನದೊಂದಿಗೆ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹೆಬ್ರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾಗಿರುವ ರವಿ ಬಿ.ಕೆ.ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಸಮಾಜದಲ್ಲಿ ಮಹಿಳೆಯರ ಪಾತ್ರ,ಪೋಕ್ಸೋ ಕಾಯ್ದೆ ಹಾಗೂ ಸೈಬರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಪೂಜ್ಯ ವೀರೇಂದ್ರ ಹೆಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಡೆಯವರ ಹತ್ತು ಹಲವು ಕಾರ್ಯಕ್ರಮಗಳು ಜನರಿಗೆ ತುಂಬಾ ಪ್ರಯೋಜನಕಾರಿಯಾಗಿರುವ ಕುರಿತು ತಿಳಿಸಿದರು.
ಹೆಬ್ರಿ ತಾಲೂಕಿನ ಯೋಜನಾಧಿಕಾರಿಯಾಗಿರುವ ಲೀಲಾವತಿಯವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರಾವತಿ ಜ್ಞಾನವಿಕಾಸ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು. ಜ್ಞಾನವಿಕಾಸ ಸದಸ್ಯರಾಗಿರುವ ಪುಷ್ಪಾವತಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ತಾಲೂಕಿನ ಜ್ಞಾನವಿಕಾಸ ಕೇಂದ್ರಗಳ ಹಿರಿಯ 9 ಮಂದಿ ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಂಸ್ಕಾರದೊಂದಿಗೆ ಆರೋಗ್ಯವಂತ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಸಂಪನ್ಮೂಲ ವ್ಯಕ್ತಿ ಯಾಗಿ ಡಾ ಮಮತಾ ಕೆ.ವಿ.
ಪ್ರಾಂಶುಪಾಲರು ಹಿರಿಯ ಸ್ತ್ರೀ ರೋಗ ಪ್ರಸೂತಿ ತಜ್ಞರು , ಎಸ್. ಡಿ. ಎಂ. ಕಾಲೇಜು ಹಾಗೂ ಆಸ್ಪತ್ರೆ,ಮತ್ತು ಸಂಶೋಧನಾ ಕೇಂದ್ರ ಕುತ್ಪಾ ಡಿ ಉಡುಪಿ ಪಾಲ್ಗೊಂಡು ಮಾತನಾಡಿ ಹಿಂದಿನ ಕಾಲದಲ್ಲಿ ಸಂಸ್ಕೃತಿ ಸಂಸ್ಕಾರ ಆಹಾರ ಪದ್ಧತಿ ಹೇಗಿತ್ತು, ಈಗ ಯಾವ ರೀತಿ ಇದೆ , ಪ್ರಸ್ತುತ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂವಾದದ ಮೂಲಕ ಮಾಹಿತಿ ನೀಡಿದರು. ಹಾಗೆಯೇ ಶಸ್ತ್ರಚಿಕಿತ್ಸಾತಜ್ಞರು ಆಗಿರುವ ಡಾಕ್ಟರ್ ರಾಕೇಶ್ ಆರ್. ಎನ್.ರವರು ಹೃದಯಾಘಾತದ ಕುರಿತು ಮಾಹಿತಿ ಹಾಗೂ ಇದಕ್ಕೆ ಪ್ರಥಮ ಚಿಕಿತ್ಸೆ ಯಾವ ರೀತಿ ನೀಡಬೇಕು ಎಂಬುದರ ಕುರಿತ ಡೆಮೋ ಮೂಲಕ ಮಾಹಿತಿ ನೀಡಿದರು.ಪುಷ್ಪಗುಚ್ಛ ಸ್ಪರ್ಧೆ ಹಾಗೂ ತಟ್ಟೆ ರಂಗೋಲಿ ಏರ್ಪಡಿಸಿದ್ದು ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ತಾರಾನಾಥ ಬಂಗೇರರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿರುವ ಶ್ರೀ ವಾದಿರಾಜ ಶೆಟ್ಟಿ,ಹೆಬ್ರಿ ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷರಾಗಿರುವ ಶಂಕರ ದೇವಾಡಿಗ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಕಾಂತಿ ಹೆಗ್ಡೆ ಸ್ವಾಗತಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ,ಸೇವಾ ಪ್ರತಿನಿಧಿ ಪ್ರಶಾಂತ್ ವಂದಿಸಿದರು. ಅನಂತರ ಜ್ಞಾನವಿಕಾಸ ಕೇಂದ್ರದ ಸದಸ್ಯೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.





