
ಹಿರಿಯಡ್ಕ: ಪೆರ್ಡೂರು ಆಲಂಗಾರು ನಿವಾಸಿ ಶ್ರೀಶನ್ ಹೊಳೆಯಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ನಡೆದಿದೆ.
ಅಲಂಗಾರು ನಿವಾಸಿ ಶ್ರೀಶನ್ ಶೆಟ್ಟಿ (15) ಎಂಬ ಬಾಲಕನು ಭಾನುವಾರ ಮಧ್ಯಾಹ್ನ ಸ್ಕೂಟರ್ ತೆಗೆದುಕೊಂಡು ಹೋಗಿ ನಾಪತ್ತೆಯಾದ ವಿಚಾರ ಸುದ್ದಿಯಾಗಿದ್ದು,ನಿನ್ನೆ ಸಂಜೆ ಕುಕ್ಕುಂಡಿ ಹೊಳೆಬಾಗಿಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈತನೊಂದಿಗೆ ಈಜಲು ಹೋಗಿದ್ದ ನವೀನ್ ಕೂಡ ಈ ವಿಚಾರವನ್ನು ಮನೆಯಲ್ಲಿ ಹೇಳದೆ ಮುಚ್ಚಿಟ್ಟಿದ್ದು ಮನೆಯವರು ಹುಡುಕಾಡಿದಾಗ ಸೋಮವಾರ ಸಂಜೆ 5 ಸುಮಾರಿಗೆ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






