
ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಕೊಳೆ, ಕಸಗಳನ್ನು ನೋಡಿ ತಾವೇನೂ ಮಾಡಲಾಗದೇ, ಅವುಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡಂತಿದ್ದ ಬಹಳಷ್ಟು ಜನರಲ್ಲಿ ಆಶಾಭಾವನೆಗಳು ಚಿಗುರೊಡೆದಿವೆ.

ಈ ನಿಟ್ಟಿನಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಹಾಗೂ ಕಾರ್ಕಳ ಟೈಗರ್ಸ್ ಜಂಟಿ ಆಶ್ರಯದಲ್ಲಿ ದಿನಾಂಕ 01, ಮಾರ್ಚ್, 2026ರ ಭಾನುವಾರ ಬೆಳಗ್ಗೆ 6:30 ಇಂದ 8:30 ಘಂಟೆಯ ವರೆಗೆ ಇಂದ್ರಪ್ರಸ್ಥದಿಂದ – ಕಾಬೆಟ್ಟು ಶಾಲೆ ರಸ್ತೆ ತನಕ ಸುತ್ತಮುತ್ತ ಪರಿಸರವನ್ನು ಸ್ವಚ್ಛ ಮಾಡಲಾಯಿತು.
ಸುಮಾರು 25 ಜನರ ಸ್ವಯಂಸೇವಕರ ಸಹಯೋಗದೊಂದಿಗೆ
25 ಗೋಣಿಚೀಲ ಪ್ಲಾಸ್ಟಿಕ್ ಕಸಗಳು,
3 ಗೋಣಿಚೀಲ ಬಿಯರ್ ಹಾಗೂ ಇನ್ನಿತರ ಗಾಜಿನ ಬಾಟಲಿಗಳು,
2 ಗೋಣಿಚೀಲ ಹಳೇ ಚಪ್ಪಲಿಗಳು ಹಾಗೂ
ಇನ್ನಿತರ ಕಸಗಳ ಒಟ್ಟು 30 ಗೋಣಿಚೀಲಗಳಾಗುವಷ್ಟು ಕಸಗಳನ್ನು ವಿಲೇವಾರಿ ಮಾಡಲಾಯಿತು.

ಈ ಅಭಿಯಾನವು ಸಾರ್ವಜನಿಕರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು “ಸ್ವಚ್ಛತೆಯೇ ಸೇವೆ” (Swachhata Hi Seva) ಮುಂತಾದ ವಿಶೇಷ ಅಭಿಯಾನಗಳನ್ನು ನಡೆಸುತ್ತಾ ಬಂದಿದೆ.
ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದೊಂದಿಗೆ, ಕಾರ್ಕಳ ಟೈಗರ್ಸ್ ತಂಡವು ಸ್ವಯಂಪ್ರೇರಿತವಾಗಿ ಹಲವು ಬಾರಿ ಸ್ವಚ್ಛತಾ ಅಭಿಯಾನ ನಡೆಸುತ್ತಾ ಬಂದಿದೆ.








