29.9 C
Udupi
Wednesday, February 18, 2026
spot_img
spot_img
HomeBlogಸ್ವಂತ ಬರೆಯುವ ಸರಳ ಟ್ರಿಕ್ಸ್ ಕಲಿತರೆ, ಇಂಗ್ಲಿಷ್ ಪರೀಕ್ಷೆ ಸುಲಭ

ಸ್ವಂತ ಬರೆಯುವ ಸರಳ ಟ್ರಿಕ್ಸ್ ಕಲಿತರೆ, ಇಂಗ್ಲಿಷ್ ಪರೀಕ್ಷೆ ಸುಲಭ

ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇನ್ನೇನು ಒಂದು ತಿಂಗಳಲ್ಲೇ ಬಂದು ಬಿಡುತ್ತವೆ. ಈ ಬಾರಿಯ ಪರೀಕ್ಷೆಗಳು ಬಹಳ ಸುಲಭವಾಗಿರುತ್ತವೆ ಎಂದು ಇಲಾಖೆ ಹೇಳಿಕೊಂಡಿದೆ. ಅದರ ಜೊತೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕೂಡ ಶೇಕಡ 50ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರೆ ಮಾತ್ರ ಶಾಲೆಯ ಫಲಿತಾಂಶ ಚೆನ್ನಾಗಿರುತ್ತದೆ ಎಂದು ಕೂಡ ಹೇಳಿದ್ದಾರೆ. ಅಂದರೆ ಶಾಲೆಯ ಫಲಿತಾಂಶಗಳು ವಿದ್ಯಾರ್ಥಿಗಳ ಅಂಕಗಳ ಮೇಲೆ ನಿಗದಿಯಾಗಿವೆ. ಎಲ್ಲಾ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದುಕೊಂಡರೆ ಶಾಲೆಯ ಋಣಾತ್ಮಕ ಫಲಿತಾಂಶ ಹೆಚ್ಚಾಗುತ್ತದೆ.
ಸಾಧಾರಣವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಕಷ್ಟದ ವಿಷಯವೆಂದರೆ ಗಣಿತ ಬಳಿಕ ವಿಜ್ಞಾನ, ಒಂದಷ್ಟು ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಇರಬಹುದೇನೋ, ಆದರೆ ಮೂರನೆಯ ಕಷ್ಟದ ವಿಷಯ ಎಂದು ಬಂದರೆ ಅದು ಇಂಗ್ಲಿಷ್. ಅದರಲ್ಲೂ ದ್ವಿತೀಯ ಭಾಷೆಯನ್ನ ಭಾಷೆಯಾಗಿ ಆಂಗ್ಲ ಭಾಷೆಯನ್ನು ಕಲಿಯುವ ಸ್ಟೇಟ್ ಸಿಲಬಸ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಷ್ಟವೇ ಸರಿ.
ಇದಕ್ಕೆ ಕಾರಣ ಮೊದಲನೆಯದಾಗಿ ಆಂಗ್ಲ ಭಾಷಾ ವ್ಯಾಕರಣ. ಗ್ರಾಮರ್ನಲ್ಲಿ ಒಂದು ಪ್ರಶ್ನೆ ಪತ್ರಿಕೆಯಲ್ಲಿ ಇರುವ ವಾಕ್ಯ ಇನ್ನೊಂದು ಪ್ರಶ್ನೆ ಪತ್ರಿಕೆಯಲ್ಲಿ ಇರುವುದಿಲ್ಲ. ಹೆಚ್ಚಿನ ಪ್ರಶ್ನೆಪತ್ರಿಕೆಯ ಪ್ರಶ್ನೆಗಳು ಸ್ವಲ್ಪ ಸ್ವಲ್ಪ ಟ್ರಿಕ್ಕಿಯಾಗಿದ್ದು ಅವುಗಳನ್ನು ಉತ್ತರಿಸುವಲ್ಲಿ ಮಕ್ಕಳು ಎಡವಿ ಒಂದೊಂದೇ ಅಂಕಗಳನ್ನು ಕಳೆದುಕೊಳ್ಳುತ್ತಾರೆ.
ಇದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ ಮೊಟ್ಟಮೊದಲನೆಯದಾಗಿ ಆರ್ಟಿಕಲ್ಸ್ . ಇದು ಕನ್ನಡದಲ್ಲಿ ಇಲ್ಲ. ಆಂಗ್ಲ ಭಾಷೆಯಲ್ಲಿ ಇರುವುದು ಮೂರೇ ಆರ್ಟಿಕಲ್ಸ್ ಅವುಗಳೆಂದರೆ ಎ ಆ್ಯನ್ ಮತ್ತು ದ. ಇದರಲ್ಲಿ ಎ ಮತ್ತು ಆ್ಯನನ್ನು ಬಳಸುವ ಟ್ರಿಕ್ಕಿ ಸಮಸ್ಯೆಗಳು ಎಲ್ಲಾ ವಿದ್ಯಾರ್ಥಿಗಳಿಗೂ ಗೊತ್ತಿದ್ದರೂ ಕೂಡ ಕನ್ಫ್ಯೂಷನ್. ಇದನ್ನು ನೆನಪಿಡಲು ಸುಲಭ ವಿಧಾನವೆಂದರೆ ಕನ್ನಡ ಅಥವಾ ಹಿಂದಿ ಭಾಷೆಯ ಸ್ವರಗಳು ಮತ್ತು ವ್ಯಂಜನಗಳನ್ನು ನೆನಪಿಟ್ಟುಕೊಳ್ಳುವುದು. ಕನ್ನಡದ ಸ್ವರಾಕ್ಷರಗಳಿಂದ ಯಾವೆಲ್ಲಾ ಪದಗಳು ಓದುವಾಗ ಬರುತ್ತವೆಯೋ ಅವುಗಳ ಮುಂದೆ ಆ್ಯನ್ ಅನ್ನು ಬಳಸುವುದು. ಇನ್ನು ಒಂದೇ ವಸ್ತುವಿದ್ದು, ಆ ವಸ್ತುವಿನ ಹೆಸರು ಓದುವಾಗ ವ್ಯಂಜನಾಕ್ಷರವಾಗಿದ್ದರೆ ಅದರ ಆಂಗ್ಲ ಭಾಷಾ ಅಕ್ಷರಗಳನ್ನು ಗಣನೆಗೆ ತೆಗೆದುಕೊಳ್ಳದೆ ಅದರ ಮುಂದೆ ಎ ಆರ್ಟಿಕಲ್ ಅನ್ನು ಬಳಸಬೇಕು. ಇದಕ್ಕೆ ನಾವು ಅ ದಿಂದ ಅ: ದವರೆಗಿನ ಶಬ್ದಗಳಿಂದ ಪ್ರಾರಂಭವಾಗುವ ಎಲ್ಲಾ ಪದಗಳ ಮುಂದೆ ಆ್ಯನ್ ಅನ್ನು ಬಳಸುತ್ತೇವೆ. ಇದನ್ನು 8 ಮತ್ತು 9 ಹಾಗೂ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳಬೇಕು.
ಇನ್ನು ಲ್ಯಾಂಗ್ವೇಜ್ ಫಂಕ್ಷನ್ ಎನ್ನುವಂತಹ ಒಂದು ಸ್ಪೋಕನ್ ಇಂಗ್ಲೀಷ್ ಗೆ ಸಂಬಂಧಿಸಿದ ಪ್ರಶ್ನೆ ಬರುತ್ತದೆ. ಇದರಲ್ಲಿ ಒಂದು ಹತ್ತರಷ್ಟು ಬೇರೆಬೇರೆ ಭಾಷಾ ಕಾರ್ಯಗಳು. ಉದಾಹರಣೆಗೆ ಅಡ್ವೈಸ್, ಅಪೋಲಜಿ, ಡೈರೆಕ್ಷನ್, ರಿಕ್ವೆಸ್ಟ್, ಸೀಕಿಂಗ್ ಹೆಲ್ಪ್, ಅಗ್ರಿಯಿಂಗ್, ರಿಜೆಕ್ಟಿಂಗ್ ಇನ್ವಿಟೇಶನ್, ಎಕ್ಸೆಪ್ಟಿಂಗ್, ಆರ್ಡರ್, ಗಿವಿಂಗ್ ಹೆಲ್ಪ್ ಮೊದಲಾದವು. ಅಡಿಗೆರೆ ಹಾಕಿದ ವಾಕ್ಯವನ್ನು ಓದಿಕೊಂಡು ಅದರ ಅರ್ಥವನ್ನು ನೋಡಿಕೊಂಡು ಅದು ಯಾವ ಲ್ಯಾಂಗ್ವೇಜ್ ಫಂಕ್ಷನ್ ಗೆ ಸೇರಿದೆ ಎಂಬುದನ್ನು ವಿದ್ಯಾರ್ಥಿಗಳು ಬರೆಯಬೇಕಾಗುತ್ತದೆ. ಇದಕ್ಕೆ ನಾಲ್ಕು ಉತ್ತರಗಳನ್ನು ಕೊಡಲಾಗಿರುತ್ತದೆ. ಅದರಲ್ಲಿ ಒಂದನ್ನು ಆರಿಸಬೇಕು. ಇಂಗ್ಲೀಷ್ ತುಂಬಾ ಕಷ್ಟ ಎನ್ನುವ ವಿದ್ಯಾರ್ಥಿಗಳು ನಾಲ್ಕು ಉತ್ತರಗಳನ್ನು ಕೂಡ ಬರೆದು ಸರಿ ಅನಿಸಿದ್ದಕ್ಕೆ ಅಡಿಗೆರೆ ಎಳೆಯಬಹುದು.
ಮುಂದೆ ಕ್ವೆಶ್ಚನ್ ಟ್ಯಾಗ್ ಎನ್ನುವಂತ ಪ್ರಶ್ನೆ. ನಾವು ಕನ್ನಡದಲ್ಲಿ ಹೌದಲ್ವಾ, ಅಲ್ವಾ ಹೀಗೆ ಮಾತನಾಡುವಾಗ ತುಂಬಾ ಸಲ ಬಳಸುತ್ತೇವೆ. ಆದರೆ ಅದನ್ನು ಆಂಗ್ಲ ಭಾಷೆಯಲ್ಲಿ ಬಳಸುವಾಗ ಮಾಡೆಲ್ ವರ್ಬ್ ಕೂಡ ಅದರಲ್ಲಿ ಸೇರಿಕೊಳ್ಳು ಕಾರಣ ಅದು ಆಯಾ ಮಾಡೆಲ್ ವರ್ಬ್ ಗೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ಉದಾಹರಣೆಗೆ ವಾಕ್ಯವು ಪಾಸಿಟಿವ್ ಆಗಿದ್ದರೆ ಕ್ವೆಶ್ಚನ್ ಟ್ಯಾಗ್ ನೆಗೆಟಿವ್ ಆಗಿರುತ್ತದೆ. ಪ್ರತಿ ಕ್ವೆಶ್ಚನ್ ಟ್ಯಾಗ್ ಗೆ ಕ್ವೆಶ್ಚನ್ ಮಾರ್ಕ್ ಬಳಸುವುದು ಕಡ್ಡಾಯವಾಗಿರುತ್ತದೆ. ಅದರ ಜೊತೆಯಲ್ಲಿ ವರ್ಬ್ ಪಾಸ್ಟ್ ಟೆನ್ಸ್ ಆಗಿದ್ದರೆ ಡಿಡ್ ಫಾರ್ಮ್, ವರ್ಬ್ ಪ್ರೆಸೆಂಟ್ ಟೆನ್ಸ್ ಆಗಿದ್ದರೆ ಸಿಂಗ್ಯುಲರ್ ನಲ್ಲಿ ಡಸ್ ಫಾರ್ಮ್, ಪ್ಲೂರಲ್ ನಲ್ಲಿ ಡು ಫಾರ್ಮ್, ವರ್ಬ್ ಫ್ಯೂಚರ್ ಟೈಮ್ ಆಗಿದ್ದರೆ ವಿಲ್ ಬದಲಿಗೆ ಓಂಟ್ ಪದವನ್ನು ಬಳಸಬೇಕಾಗುತ್ತದೆ. ಹಾಗೆಯೇ ಶಲ್ ಪದಕ್ಕೆ ಶಾಂಟ್, ಐ ಯಾಮ್ ಇರುವಲ್ಲಿ ಆರ್ ನ್ಂಟ್ ಐ ಪದಗಳನ್ನು ಬಳಸಿ ಕ್ವೆಶ್ಚನ್ ಟ್ಯಾಗ್ ಬರೆಯಬೇಕಾಗುತ್ತದೆ.
ಇನ್ನು ಒಂದು ಪದವನ್ನು ನೌನ್ ಅಥವಾ ವರ್ಬ್ ಆಗಿ ವಾಕ್ಯ ಮಾಡಲು ಕೇಳುತ್ತಾರೆ. ಅಕಸ್ಮಾತ್ ಕೊಟ್ಟ ಪದ ನೌನ್ ಆಗಿ ಬಳಸಬೇಕಾದರೆ ಅದನ್ನು ವಾಕ್ಯದ ಮೊದಲಿಗೇ ಬರೆಯಬೇಕು. ಅದನ್ನು ಆಗಿ ಉಪಯೋಗಿಸಬೇಕು ಎಂಬ ಪ್ರಶ್ನೆ ಇದ್ದರೆ ಮೊದಲೆಂದು ನಾವು ಅಥವಾ ಯಾವುದಾದರೂ ಹೆಸರನ್ನು ಅಥವಾ ಪ್ರೋನೌನ್ ಇನ್ನೂ ಸುಲಭಿಕರಿಸಬೇಕೆಂದರೆ ಐ ಎನ್ನುವ ಪ್ರಣವನ್ ಹಾಕಿ ಅದರ ನಂತರ ಕೊಟ್ಟ ಪದವನ್ನು ಬಳಸಿ ಬರೆದರೆ ಅದು ವರ್ಬ್ ಆಗಿಬಿಡುತ್ತದೆ.
ಮುಂದೆ ಒಂದು ಪದವನ್ನು ಬ್ರಾಕೆಟ್ ಒಳಗೆ ಕೊಟ್ಟು ವಾಕ್ಯದ ಮಧ್ಯದಲ್ಲಿ ಆದರ ಸರಿಯಾದ ರೂಪವನ್ನು ಬರೆಯಲು ಹೇಳುತ್ತಾರೆ. ಅಲ್ಲಿ ಸಫಿಕ್ಸ್ ಅನ್ನು ಸೇರಿಸಿ ವಾಕ್ಯಕ್ಕೆ ಸರಿ ಹೊಂದುವ ಪದ ಬಳಸಬೇಕಾಗುತ್ತದೆ. ಉದಾಹರಣೆಗೆ ಮೆಂಟ್ , ಇಂಗ್, ಲಿ, ಎಲ್, ಮೆಂಟಲ್ ಇತ್ಯಾದಿ.

ಮತ್ತೆ ಎಡಿಟ್ ಎಂಬ ಎರಡು ತಪ್ಪುಗಳ ವಾಕ್ಯದ ಪ್ರಶ್ನೆಯೊಂದು ಎರಡು ಅಂಕಗಳಿಗೆ ಬರುತ್ತದೆ. ಸಾಧಾರಣವಾಗಿ ಅದು ಪ್ರಶ್ನೆ ಪತ್ರಿಕೆಯ 17 ನೆಯ ಪ್ರಶ್ನೆ. ಅಲ್ಲಿನ ತಪ್ಪುಗಳಿಗೆ ಎರಡು ಕ್ಲೂ ಕೊಡಲಾಗುತ್ತದೆ. ಉದಾಹರಣೆಗೆ ಕ್ಯಾಪಿಟಲ್ ಲೆಟರ್ ಸೇರಿಸಿ, ಸ್ಪೆಲ್ಲಿಂಗ್ ಸರಿಪಡಿಸಿ, ಅಡ್ವರ್ಬ್ ಸರಿಮಾಡಿ, ವರ್ಬ್ ಸರಿಮಾಡಿ, ಆರ್ಟಿಕಲ್ ಸರಿಮಾಡಿ, ಪ್ರಿಪೊಸಿಶನ್ ಸರಿ ಮಾಡಿ ಹೀಗೆ. ಅವುಗಳನ್ನು ಹುಡುಕಿ ಸರಿ ಮಾಡಿ ಬರೆಯಬೇಕು.

ಇನ್ನು ಪ್ರಶ್ನೆ ಸಂಖ್ಯೆ 31 ರ ಬಳಿಕ ಎಲ್ಲವೂ ಸ್ಕೋರಿಂಗ್ ಪ್ರಶ್ನೆಗಳು. ಪಾಠ ಓದದೆ, ಭಾಷೆ ಬಂದರೆ ಬರೆಯುವಂತಹ ಪ್ರಶ್ನೆಗಳು. ಮೊದಲನೆಯದಾಗಿ ಚಿಕ್ಕದಾಗಿ ಕೊಟ್ಟ ಪ್ರೊಫೈಲ್ ಅನ್ನು ವಾಕ್ಯ ಮಾಡಿ ಬರೆಯುವುದು, ನಂತರ ಅರ್ಧಂಬರ್ಧ ಕೊಟ್ಟ ಕಥೆಯ ಪದಗಳಿಗೆ ವಾಕ್ಯ ರಚನೆ ಮಾಡುತ್ತಾ ಪೂರ್ತಿ ಕತೆ ಬರೆಯುವುದು, ಮತ್ತೆ ಚಿತ್ರ ನೋಡಿ ತನಗೆ ಕಾಣಿಸಿದ ಹಾಗೆ, ಅಥವಾ ಕಥೆ ಸೃಷ್ಟಿಸಿ ಬರೆಯುವುದು. ತದ ನಂತರ ಪದ್ಯ ಇರುತ್ತದೆ. ಅದನ್ನು ಪೂರ್ಣಗೊಳಿಸುವುದು. ಬಳಿಕ ಪದ್ಯವೊಂದರ ಈ ವರ್ಷಕ್ಕೆ ಮೊದಲನೇ ಪದ್ಯದ ಭಾವಾರ್ಥವನ್ನು ನಾಲ್ಕು ಅಂಕಗಳಿಗೆ ಬರೆಯಬೇಕು. ಅದರ ಬಳಿಕ ಅಲ್ಲೊಂದು ಮೊದಲು ಓದದೆ ಇರುವ ಅನ್ ನೊನ್ ಪ್ಯಾಸೇಜ್ ಇರುತ್ತದೆ. ಅದನ್ನು ಓದಿ ಅದರ ಮೇಲಿನ ಎರಡು ಪ್ರಶ್ನೆಗಳಿಗೆ ಎರಡು ಮತ್ತೆರಡು ನಾಲ್ಕು ಅಂಕಗಳಿಗೆ ಪ್ರಶ್ನೆ ಬರೆಯುವುದು.

ಕೊನೆಯದಾಗಿ ಪ್ರಬಂಧ ಮತ್ತು ಪತ್ರ ಲೇಖನ. ಯಾವುದಾದರೂ ಕಚೇರಿಗೆ ಬರೆಯುವ ಪತ್ರಕ್ಕೂ, ಬಂಧು ಮಿತರಿಗೆ ಬರೆಯುವ ಪತ್ರಕ್ಕೂ ಫ್ರಮ್ ಅಡ್ರೆಸ್ ಒಂದೇ ಆಗಿರುತ್ತದೆ. ಯಾರಿಗೆ ಬರೆಯುತ್ತೇವೆ ಎನ್ನುವ ಟು ಅಡ್ರೆಸ್ ಬೇರೆ ಬೇರೆ ಆಗಿರುವುದನ್ನು ಪ್ರಶ್ನೆಯಲ್ಲಿ ಗಮನಿಸಬೇಕು.

ಹೆಚ್ಚಿನ ಮಕ್ಕಳಿಗೆ ಕಷ್ಟ ರಿಪೋರ್ಟೆಡ್ ಸ್ಪೀಚ್ ಮತ್ತು ಆಕ್ಟಿವ್ ವಾಯ್ಸ್ ನಿಂದ ಪ್ಯಾಸಿವ್ ವಾಯ್ಸ್ ಗೆ ಬದಲಾಯಿಸುವ ಪ್ರಕ್ರಿಯೆ. ಅಂದರೆ ಇಂಡೈರೆಕ್ಟ್ ಅಥವಾ ರಿಪೋರ್ಟೆಡ್ ಸ್ಪೀಚ್ ಎಂದರೆ ನಾಟಕ ರೂಪದಲ್ಲಿ ಇರುವ ವಾಕ್ಯವನ್ನು ಭೂತಕಾಲದಲ್ಲಿ ಕಥೆಯ ರೂಪದಲ್ಲಿ ಬರೆಯುವುದು. ಪ್ಯಾಸಿವ್ ವಾಯ್ಸ್ ಎಂದರೆ ವಾಕ್ಯದ ಸಬ್ಜೆಕ್ಟ್ ಮತ್ತು ಪ್ರೀಡಿಕೇಟ್ ಅದಲು ಬದಲಾಗಿ ಬಿಡುತ್ತದೆ. ಕೆಲವೊಮ್ಮೆ ವರ್ಬ್ ಪದದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆಗುವ ಟ್ರಿಕ್ಸ್ ಕಲಿಯಬೇಕು ಅಷ್ಟೇ.

ಎಲ್ಲಾ ಪ್ರಶ್ನೋತ್ತರಗಳಿಗೆ ಸ್ವಂತ ವಾಕ್ಯಗಳನ್ನು ಬಳಸಿ ಉತ್ತರ ಬರೆಯಬಹುದು. ಮೊದಲ ಪದ್ಯದ ಸಮ್ಮರಿ ಕಲಿಯಲೇ ಬೇಕು. ಇದನ್ನು ಕೂಡ ಸ್ವಂತ ವಾಕ್ಯದಲ್ಲಿ ಬರೆಯಬಹುದು. ಆದರೆ ಪ್ಯಾರಾಗ್ರಾಫ್ ಉತ್ತರಗಳನ್ನು ನಿರೀಕ್ಷಿಸಲಾಗುತ್ತದೆ. ಪಾಯಿಂಟ್ ಉತ್ತರಗಳು ಎಕ್ಸ್‌ಟ್ರ್ಯಾಕ್ಸ್ ಪ್ರಶ್ನೆಗಳಿಗೆ ಮತ್ತು ಮೊದಲ 16 ಗ್ರಾಮರ್ ಪ್ರಶ್ನೆಗಳಿಗೆ ಮಾತ್ರ ಬರೆಯಬೇಕಾಗುತ್ತದೆ.

ಅಂಕಗಳನ್ನು ನೋಡಿಕೊಂಡು ಉತ್ತರಿಸಬೇಕಾದದ್ದು ಅಗತ್ಯ. ಪ್ರೊಫೈಲ್ ಬರಹ, ಕಥಾ ವಿಸ್ತರಣೆ, ಚಿತ್ರ ನೋಡಿ ವಿಶ್ಲೇಷಣೆ ಬರೆಯುವುದು, ಪ್ರಬಂಧ, ಪತ್ರ ಲೇಖನ ಇವೆಲ್ಲಾ ಓದದೆ ಇಂಗ್ಲಿಷ್ ಭಾಷೆ ಬಂದರೆ ಸಾಕು ಬರೆದು ಪಾಸಾಗಲು. ಅಲ್ಲಿ ಏಳನೇ ಅಥವಾ ಎರಡನೇ ಪದ್ಯವನ್ನು ಪೂರ್ತಿಯಾಗಿ ಬಾಯಿಪಾಠ ಬರೆಯಲು ಕಲಿತಿರಬೇಕು. ಎಲ್ಲಕ್ಕಿಂತ ದೊಡ್ಡ ಪಾಠ ಡಿಸ್ಕವರಿ. ಅದರ ಎಕ್ಸ್‌ಟ್ರ್ಯಾಕ್ಟ್ ಮಾತ್ರ ಕಲಿತರೆ ಸಾಕು.

ಇಷ್ಟನ್ನು ತಯಾರಿ ಮಾಡಿ ಕಲಿತು, ಇದುವರೆಗೆ ಸಿಕ್ಕಿದ ಎರಡು ಪ್ರಿಪರೇಟರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಮತ್ತು ಮುಂದೆ ಸಿಗಲಿರುವ ಪ್ರಶ್ನೆ ಪತ್ರಿಕೆ ಒಟ್ಟಾಗಿ ಮತ್ತು ಇಲಾಖೆಯಿಂದ ಬಂದ ನಾಲ್ಕು ಮಾದರಿ ಪ್ರಶ್ನಾ ಪತ್ರಿಕೆಗಳು, ಒಟ್ಟಾಗಿ ಏಳು ಪ್ರಶ್ನಾ ಪತ್ರಿಕೆಗಳಲ್ಲಿ ಇರುವ ಎಲ್ಲಾ ಪ್ರಶ್ನೋತ್ತರಗಳನ್ನು ಕಲಿತರೆ ದ್ವಿತೀಯ ಭಾಷೆಯಾದ ಆಂಗ್ಲ ಭಾಷೆಯಲ್ಲಿ ಖಂಡಿತವಾಗಿಯೂ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದು ಡಿಸ್ಟಿಂಕ್ಷನ್ ಅಂಕಗಳನ್ನು ಗಳಿಸುವಲ್ಲಿ ಸಂದೇಹವೇ ಇಲ್ಲ. ಬರವಣಿಗೆಯಲ್ಲಿ ಸ್ವಲ್ಪ ಸ್ವಂತಿಕೆಯೂ ಸೇರಿರಲಿ. ಎಲ್ಲಾ ಉರು ಹೊಡೆಸಿ ಬರೆಯಿಸಲು ಈ ಪರೀಕ್ಷೆಯಲ್ಲಿ ಸಾಧ್ಯವಿಲ್ಲ. ಏಕೆಂದರೆ ಗ್ರಾಮರ್ ಗಣಿತದಂತೆ. ಅದಕ್ಕೊಂದು ರೂಲ್ ಇದೆ. ಅದನ್ನು ಪಾಲಿಸಲೇ ಬೇಕು. ಒಂದು ವಾಕ್ಯದ ಹಾಗೆ ಇನ್ನೊಂದು ವಾಕ್ಯ ಇರದು. ಆದರೆ ಒಂದೇ ಗ್ರಾಮರ್ ನಿಯಮವನ್ನು ಎಲ್ಲಾ ವಾಕ್ಯಗಳು ಕೂಡಾ ಫಾಲೋ ಮಾಡುತ್ತವೆ ಎಂಬುದನ್ನು ನೆನಪಿನಲ್ಲಿ ಇಟ್ಟಿರಬೇಕು. ಆಗ ಕೊಟ್ಟ ಪದ ವರ್ಬ್ ರೂಪದಲ್ಲಿ ಆದರೂ, ನೌನ್ ರೂಪದಲ್ಲಿ ಆದರೂ ತಮ್ಮದೇ ಸ್ವಂತ ವಾಕ್ಯಗಳನ್ನು ಮಾಡಬಹುದು. ನೌನ್ ಆದರೆ ಆ ಪದ ಮೊದಲಿಗೆ ಬರಬೇಕು. ವರ್ಬ್ ಆಗಿದ್ದರೆ ಎರಡನೆಯದಾಗಿ ಬರಬೇಕು ಎಂಬುದನ್ನು ಸರಳವಾಗಿ ತಲೆಯಲ್ಲಿ ಇಟ್ಟುಕೊಂಡಿರಬೇಕು.

ಆಂಗ್ಲರಿಗೆ ಕನ್ನಡ ಕಬ್ಬಿಣದ ಕಡಲೆಯೇ ಹೊರತು ಕನ್ನಡಿಗರು ಎಲ್ಲಾ ಭಾಷೆಗಳನ್ನು ಕಲಿಯುವುದರಲ್ಲಿ ನಿಸ್ಸೀಮರು. ಹಾಗಾಗಿ ಯಾರೆಲ್ಲಾ ಅಲ್ಪ, ಸ್ವಲ್ಪ ಆಂಗ್ಲ ಭಾಷೆ ಅರ್ಥ ಆಗಿ, ಇಂಟರ್ ನ್ಯಾಷನಲ್ ಭಾಷೆಯಲ್ಲಿ ಪರೀಕ್ಷೆ ಬರೆಯುವ ನೀವೆಲ್ಲರೂ ಗ್ರೇಟ್ ಅಲ್ಲದೆ ಮತ್ತಿನೇನು? ಅಲ್ವಾ? ನೀವೇನಂತೀರಿ?
ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ..

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page