
ಕಾರ್ಕಳ ಐಸಿಎಐ ನಡೆಸಿದ 2024 ರ ನವಂಬರ್ ಸಿಎ ಅಂತಿಮ ಪರೀಕ್ಷೆಯಲ್ಲಿ ಸಾಣೂರಿನ ಜೀವಂದರ ಬಲಿಪ ಮತ್ತು ಲತಾ ದಂಪತಿಯ ಪುತ್ರ ಪ್ರಸನ್ನ ಕುಮಾರ್ ಜೈನ್ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ . ಇವರು ತಮ್ಮ ಪ್ರಾಥಮಿಕ ಶಿಕ್ಷಣ ಎಸ್ ಎನ್ ವಿ ಕಾಲೇಜ್ ಕಾರ್ಕಳ, ಪಿಯುಸಿ govt ಕಾಲೇಜ್ ಸಾಣೂರು ಹಾಗೂ ಪದವಿ ಶಿಕ್ಷಣವನ್ನು ಎಂಪಿಎಂ ಕಾಲೇಜ್ ಕಾರ್ಕಳ ಇಲ್ಲಿ ಮುಗಿಸಿರುತ್ತಾರೆ. ಇವರು ಕಾರ್ಕಳದ ಖ್ಯಾತ ಲೆಕ್ಕಪರಿಶೋಧಕರಾದ ಸಿಎ ಪ್ರಭಾತ್ ಕುಮಾರ್ ಇಲ್ಲಿ ಸಿಎ ಪರೀಕ್ಷಾ ತರಬೇತಿಯನ್ನು ಪಡೆದಿರುತ್ತಾರೆ




