
ಮೈಸೂರು: ಸುಪ್ರೀಂಕೋರ್ಟಿನ ಆದೇಶದಂತೆ ಹೊಸ ಮನೆಗೆ ವಿದ್ಯುತ್, ನೀರು ಸಂಪರ್ಕಕ್ಕೆ ಓಸಿ ಪತ್ರ ಕಡ್ಡಾಯವಾಗಿದ್ದು ಇದೀಗ ಇದೇ ಕಾರಣಕ್ಕೆ ಮೈಸೂರಿನ ಕುವೆಂಪು ನಗರದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮಯ್ಯ ಅವರ ಹೊಸ ನಿವಾಸಕ್ಕೆ ವಿದ್ಯುತ್ ಸಂಪರ್ಕಕ್ಕೆ ತೊಡಕು ಉಂಟಾಗಿದೆ.
ಡಿಸೆಂಬರ್‌ನಲ್ಲಿ ಅವರ ಹೊಸ ಮನೆಯ ಗೃಹಪ್ರವೇಶಕ್ಕೆ ಸಿದ್ದತೆ ನಡೆಯುತ್ತಿದ್ದು ಈ ಸಂಬಂಧ ಎರಡು ತಿಂಗಳ ಹಿಂದೆಯೇ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಓಸಿ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಆಗ್ಲಿ ಮಿನಿಸ್ಟರ್ ಆಗಲಿ ದೇಶದ ಪ್ರತಿ ಪ್ರಜೆಗೂ ಒಂದೇ ರೂಲ್ಸ್ ಅನ್ವಯವಾಗಲಿದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.






















































