
ಮಂಗಳೂರು: ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿದ್ರೆ ನಿಮ್ಮ ಮನೆಗೆ ಪೊಲೀಸ್ ಬರುತ್ತಾರೆ, ಜೈಲಿಗೆ ಹೋಗಲು ತಯಾರಾಗಿರಿ ಎಂದು ಹೇಳಿದ್ದಾರೆ.
ಈಗಾಗಲೇ ವಿದೇಶದಲ್ಲಿರುವ ಇಬ್ಬರು ಸೇರಿ ಆರು ಮಂದಿಯನ್ನು ಬಂಧಿಸಿದ್ದು ಇನ್ನೂ ಏಳು ಮಂದಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ನೀವು ಎಲ್ಲೇ ಇರಿ, ವಿದೇಶದಲ್ಲೇ ಇರಿ, ಹೊರ ಜಿಲ್ಲೆಯಲ್ಲಿಯೇ ಇರಿ. ಪೊಲೀಸ್ ಅಲ್ಲಿಗೆ ಬಂದು ಅರೆಸ್ಟ್ ಮಾಡುತ್ತಾರೆ. ಸಾಮಾಜಿಕ ಜಾಲತಾಣವನ್ನು ಉತ್ತಮ ವಿಚಾರಕ್ಕೆ ಬಳಸಿ, ಇಂತಹ ವಿಚಾರಕ್ಕೆ ಬಳಸದಿರಿ ಎಂದು ಎಚ್ಚರಿಕೆ ನೀಡಿದ್ದಾರೆ.





