ವಿಜೇತ ವಿಶೇಷ ಶಾಲಾ ಮಕ್ಕಳ ಸಾಧನೆ

ಸಾನಿಧ್ಯ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಶಕ್ತಿನಗರ ಮಂಗಳೂರಿನಲ್ಲಿ ನಡೆದ ವಿಶ್ವ ಡೌನ್ ಸಿನ್ಡ್ರೋಮ್ ದಿನಾಚರಣೆ ಬೋಚಿ ಚಾಂಪಿಯನ್ ಶಿಪ್ 2026ರಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳು ಭಾಗವಹಿಸಿ ಹುಡುಗಿಯರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ತರಬೇತುದಾರರಾದ ದೈಹಿಕ ಶಿಕ್ಷಕ ಉಮಾಶಂಕರ್, ವಿಶೇಷ ಶಿಕ್ಷಕರಾದ ಹರ್ಷಿತಾ ಕಿರಣ್, ಯಮನಪ್ಪ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.























































